×
Ad

ಬದ್ರಿಯಾ ಜುಮಾ ಮಸೀದಿ ಅಡ್ಡೂರು: ವಾರ್ಷಿಕ ಸಭೆ, ಪದಾಧಿಕಾರಿಗಳ ಆಯ್ಕೆ

Update: 2019-12-16 22:41 IST

ಮಂಗಳೂರು : ಬದ್ರಿಯಾ ಜುಮಾ ಮಸೀದಿ ಅಡ್ಡೂರು ಇದರ ವಾರ್ಷಿಕ ಮಹಾಸಭೆಯು ಖತೀಬ್ ಮುಹಮ್ಮದ್ ಶರೀಫ್ ದಾರಿಮಿ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ ನೂತನ ಸಾಲಿನ ಆಡಳಿತ ಕಮಿಟಿಯ ಪದಾಧಿಕಾರಿಗಳನ್ನು ಆರಿಸಲಾಯಿತು.

ಅಧ್ಯಕ್ಷರಾಗಿ ಟಿ ಸಯ್ಯದ್, ಉಪಾಧ್ಯಕ್ಷರುಗಳಾಗಿ ಎ ಹಾಮದ್ ಬಾವ, ಎಂಎಸ್ ಶೇಖಬ್ಬ, ಪ್ರಧಾನ ಕಾರ್ಯದರ್ಶಿಯಾಗಿ ಪಿಎ ಇಸಾಖ್, ಜೊತೆ ಕಾರ್ಯದರ್ಶಿಗಳಾಗಿ  ಕೆ ಉಮ್ಮರ್ ಫಾರೂಕ್, ಎಕೆ ಅಬ್ದುಲ್ ಲತೀಫ್, ಸಲಹೆಗಾರರಾಗಿ ಟಿ ಅಹ್ಮದ್ ಬಾವ, ಕೋಶಾಧಿಕಾರಿಯಾಗಿ ಎಪಿ ಮುಯ್ಯದ್ದಿ, ಲೆಕ್ಕ ಪರಿಶೋಧಕರಾಗಿ  ಯು. ಹಮೀದ್ ಅವರನ್ನು ನೇಮಿಸಲಾಯಿತು.

ಈ ಸಂದರ್ಭ ಎಕೆ  ಅಶ್ರಫ್, ಡಿಎಸ್ ರಫೀಕ್, ಎಕೆ ಮುಹಮ್ಮದ್, ಎಜಿ ಅಬ್ದುಲ್ ಖಾದರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News