×
Ad

ಉಡುಪಿ : ಒಳಚರಂಡಿ ಕಾಮಗಾರಿ-ವಾಹನ ಸಂಚಾರದಲ್ಲಿ ಬದಲಾವಣೆ

Update: 2019-12-16 22:54 IST

ಉಡುಪಿ, ಡಿ.16: ಉಡುಪಿ ನಗರಸಭಾ ವ್ಯಾಪ್ತಿಯ ಕಿನ್ನಿಮೂಲ್ಕಿ ದಾಮ್ರೋ ಶಾಪ್ ಮುಂಭಾಗದಿಂದ ವೀರಭದ್ರ ರಸ್ತೆ ಕಿನ್ನಿಮೂಲ್ಕಿ ಬ್ರಹ್ಮಬೈದರ್ಕಳ ಗರೋಡಿ ಮುಂಭಾಗದವರೆಗೆ ಒಳಚರಂಡಿ ಕಾಮಗಾರಿ ನಡೆಯುತ್ತಿರುವುದರಿಂದ, ಪೃಥ್ವಿ ಶೋರೂಂ ಬಳಿ ರಿಕ್ಷಾ ನಿಲ್ದಾಣದಿಂದ ಜೋಡುಕಟ್ಟೆಯವರೆಗೆ ಬರುವ ವಾಹನ ಸಂಚಾರವನ್ನು ಡಿ.16 ರಿಂದ 31ರವರೆಗೆ ನಿಷೇಧಿಸಲಾಗಿದೆ.

ಕಿನ್ನಿಮೂಲ್ಕಿ ಗೋಪುರದ ಬಳಿ, ಮಂಗಳೂರಿನಿಂದ ಬರುವ ವಾಹನಗಳನ್ನು ಪೃಥ್ವಿ ಶೋ ರೂಂ ರಿಕ್ಷಾ ಸ್ಟ್ಯಾಂಡ್‌ನಿಂದ ಜೋಡುಕಟ್ಟೆಯವರೆಗೂ ಬದಲಿ ವ್ಯವಸ್ಥೆಯನ್ನು ಡಯಾನ ಸರ್ಕಲ್‌ವರೆಗೆ ನಿಷೇಧಿಸಿ, ಡಯಾನ ಸರ್ಕಲ್‌ನಿಂದ ಕಿನ್ನಿಮೂಲ್ಕಿ ಗೋಪುರದವರೆಗೂ ಹೋಗುವ ಎಡಬದಿ ರಸ್ತೆಯಲ್ಲಿ ಬರುವ ಹಾಗೂ ಹೋಗುವ ವಾಹನಗಳನ್ನು ಎರಡೂ ಕಡೆಯಿಂದ ಚಲಿಸುವಂತೆ ಬದಲಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News