×
Ad

ಪತ್ರ ಲೇಖನ ಸ್ಪರ್ಧೆಗೆ ಅವಧಿ ವಿಸ್ತರಣೆ

Update: 2019-12-16 22:54 IST

ಉಡುಪಿ, ಡಿ.16:ಅಂಚೆ ಇಲಾಖೆಯುಡೀಯರ್ ಬಾಪು (ಮಹಾತ್ಮ ಗಾಂಧಿ) ಯು ಆರ್ ಇಮ್ಮರ್ಟಲ್ (ಪ್ರಿಯ ಬಾಪು, ನೀವು ಅಮರರು) ಎಂಬ ವಿಷಯದ ಕುರಿತು 18 ವರ್ಷದ ಒಳಗಿನವರಿಗೆ ಮತ್ತು 18 ವರ್ಷ ಮೇಲ್ಪಟ್ಟ ವರಿಗೆ ಮುಕ್ತವಾಗಿ ಪತ್ರ ಲೇಖನ ಸ್ಪರ್ಧೆಯನ್ನು ಹಮ್ಮಿಕೊಂಡಿದೆ.

ಸ್ಪರ್ಧಾಳುಗಳು ಹಿಂದಿ/ ಇಂಗ್ಲಿಷ್ ಅಥವಾ ಪ್ರಾದೇಶಿಕ ಭಾಷೆಯಲ್ಲಿ, ಅಂತರ್ದೇಶೀಯ ಪತ್ರ ಕಾರ್ಡ್‌ನಲ್ಲಿ 500 ಶಬ್ಧಗಳು ಮೀರದಂತೆ ಬರೆದು, ಅಥವಾ ಎ4 ಹಾಳೆಯಲ್ಲಿ 1000 ಶಬ್ಧಗಳು ಮೀರದಂತೆ ಲೇಖನವನ್ನು ಕೈ ಬರಹದಲ್ಲಿ ಬರೆದು ಲಕೋಟೆಯಲ್ಲಿ ತುಂಬಿಸಿ, ಅಂಚೆ ಅಧೀಕ್ಷಕರು, ಉಡುಪಿ ಅಂಚೆ ಭಾಗ, ಉಡುಪಿ ಇವರಿಗೆ ತಲುಪಿಸುವ ಅವಧಿಯನ್ನು ಡಿ. 31ರವರೆಗೆ ಸ್ತರಿಸಲಾಗಿದೆ.

ಸ್ಪರ್ಧಾಪಟುಗಳು ತಮ್ಮ ಲೇಖನದ ಮೇಲೆ 18ವರ್ಷ ಮೇಲಿನವರು/ 18 ವರ್ಷದ ಕೆಳಗಿನವರು ಎಂಬ ಮಾಹಿತಿಯನ್ನು ಸ್ಪಷ್ಟವಾಗಿ ನಮೂದಿಸಬೇಕು. ಅತ್ಯುತ್ತಮ ಮೂರು ಪತ್ರಗಳಿಗೆ ಬಹುಮಾನಗಳನ್ನು ದೇಶೀಯ ಮಟ್ಟದಲ್ಲಿ ಕ್ರಮವಾಗಿ 50,000 ರೂ., 25,000 ರೂ., 10,000 ರೂ,. ಮತ್ತು ಕರ್ನಾಟಕ ವಲಯ ಮಟ್ಟದಲ್ಲಿ 25,000 ರೂ., 10,000 ರೂ., ಮತ್ತು 5,000.ವನ್ನು ನೀಡಲಾಗುವುದು.

ಭಾರತೀಯ ಅಂಚೆ ಇಲಾಖೆಯ ವತಿಯಿಂದ ನಡೆಯುವ ಈ ಪತ್ರ ಲೇಖನ ಸ್ಪರ್ಧೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಉಡುಪಿ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News