×
Ad

ಮಂಗಳೂರು: ಡಿ.18ರಂದು ಡಿಸಿ ಕಚೇರಿ ಮುಂದೆ ಪ್ರತಿಭಟನೆ

Update: 2019-12-17 23:09 IST

ಮಂಗಳೂರು, ಡಿ.17: ವಕ್ಫ್ ಸೊತ್ತುಗಳ ಹಿತರಕ್ಷಣಾ ಸಮಿತಿ, ಉಳ್ಳಾಲ ಇದರ ವತಿಯಿಂದ ವಕ್ಫ್ ಸೊತ್ತನ್ನು ಮಾರಾಟ ಮಾಡಿದವರ ವಿರುದ್ಧ ಡಿ.18ರಂದು ಅಪರಾಹ್ನ 3 ಗಂಟೆಗೆ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಯಲಿದೆ.

ಉಳ್ಳಾಲ ದರ್ಗಾಕ್ಕೆ ಸೇರಿದ ನಗರದ ಪಂಪ್‌ವೆಲ್ ಬಳಿಯ ಬೆಲೆ ಬಾಳುವ ಜಾಗ ಮತ್ತು ಅದರಲ್ಲಿರುವ ಕಟ್ಟಡವನ್ನು ವಕ್ಫ್ ಇಲಾಖೆಯ ಅನುಮತಿಯಿಲ್ಲದೆ ಮಾರಾಟ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಸಮಿತಿಯ ಅಧ್ಯಕ್ಷ ರಿಯಾಝ್ ಅಳೇಕಲ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News