ಸೇವಾ ಮನೋಧರ್ಮ ಮಾನವೀಯತೆಯ ಲಕ್ಷಣ: ಪ್ರಭಾಕರ ಶರ್ಮ
Update: 2019-12-18 23:25 IST
ಮಂಗಳೂರು, ಡಿ.18: ಸೇವಾ ಮನೋಧರ್ಮವು ಮಾನವೀಯತೆಯ ಲಕ್ಷಣವಾಗಿದೆ. ಯುವ ರೆಡ್‌ಕ್ರಾಸ್ ಘಟಕವು ಸೇವೆಯ ಜೊತೆಗೆ ಮಾನವೀಯತೆಯನ್ನು ಕಲಿಸಿಕೊಡುತ್ತಿರುವುದು ಶ್ಲಾಘನೀಯ ಎಂದು ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ. ಜಿಲ್ಲಾ ಕಾರ್ಯದರ್ಶಿ ಎಸ್.ಎ ಪ್ರಭಾಕರ ಶರ್ಮ ಹೇಳಿದರು.
ನಗರದ ರಥಬೀದಿಯ ಡಾ.ಪಿ.ದಯಾನಂದ ಪೈ-ಪಿ.ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕದ ವಾರ್ಷಿಕ ನಾಲ್ಕು ದಿನಗಳ ಶಿಬಿರದ ಸಮಾರೋಪದಲ್ಲಿ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಕಾಲೇಜಿನ ಪ್ರಾಧ್ಯಾಪಕ ಡಾ.ಪ್ರಕಾಶಚಂದ್ರ ಶಿಶಿಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪರಿಸರವಾದಿ ದಿನೇಶ ಹೊಳ್ಳ ಮತ್ತು ಶಿಬಿರದ ಸಂಯೋಜಕ ಅಶ್ವಿನ್ ಕುಮಾರ್ ಮಾತನಾಡಿದರು.
ಯುವ ರೆಡ್‌ಕ್ರಾಸ್ ಸಂಯೋಜಕ ಡಾ. ಮಹೇಶ್ ಕೆ.ಬಿ., ಯುವ ರೆಡ್‌ಕ್ರಾಸ್ ಘಟಕದ ಸಂಚಾಲಕರಾದಪ್ರೊ. ನಯನಕುಮಾರಿ ಹಾಗೂ ಪ್ರೊ.ಮಣಿಭೂಷಣ್ ಉಪಸ್ಥಿತರಿದ್ದರು. ಶಿಬಿರಾರ್ಥಿ ಸ್ನೇಹಾ ಕಾರ್ಯಕ್ರಮ ನಿರೂಪಿಸಿದರು.