ಕಣಚೂರು: ಅಧಿಕಾರಿಗಳೊಂದಿಗೆ ಮಕ್ಕಳ ಸಂವಾದ ಕಾರ್ಯಕ್ರಮ
ಮಂಗಳೂರು, ಡಿ.18: ಮಂಗಳೂರು ಮಹಾನಗರ ಪಾಲಿಕೆ ಮತ್ತು ಲಯನ್ಸ್ ಕ್ಲಬ್ ಮಂಗಳಗಂಗೋತ್ರಿ ಹಾಗೂ ದ.ಕ.ಜಿಲ್ಲಾ ಮಕ್ಕಳ ಹಕ್ಕುಗಳ ಮಾಸೋತ್ಸವ ಸಮಿತಿ, ದ.ಕ.ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯ ಶಾಲಾ ಮಕ್ಕಳ ಜೊತೆ ಅಧಿಕಾರಿಗಳೊಂದಿಗೆ ಮಕ್ಕಳ ಮುಖಾಮುಖಿ ಸಂವಾದ ಕಾರ್ಯಕ್ರಮವು ಇತ್ತೀಚೆಗೆ ದೇರಳಕಟ್ಟೆಯ ಕಣಚೂರು ಪಬ್ಲಿಕ್ ಸ್ಕೂಲ್‌ನಲ್ಲಿ ನಡೆಯಿತು.
ಕಣಚೂರು ಪಬ್ಲಿಕ್ ಸ್ಕೂಲ್‌ನ ಸಂಚಾಲಕ ಅಬ್ದುರ್ರಹ್ಮಾನ್ ಕಾರ್ಯಕ್ರಮ ಉದ್ಘಾಟಿಸಿದರು. ಕೋಟೆಕಾರ್ ಪಪಂ ನ ಮುಖ್ಯಾಧಿಕಾರಿ ಪ್ರಭಾಕರ ಎಂ.ಪಿ. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳಳಾದ ಆನಂದ, ದಯಾನಂದ ಬಿ.,ರಾಜೇಶ್ವರಿ, ರೇಖಾ, ಶಾರದಾ, ವೆಂಕಪ್ಪಎಂ., ಲವಿಟಾ ಡಿಸೋಜ, ಡಾ. ಉಮಾದೇವಿ, ಇಕ್ಬಾಲ್ ಅಹ್ಮದ್, ಉಪಸ್ಥಿತರಿದ್ದರು.
ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಆಶಾಲತಾ ಸುವರ್ಣ ಸಂವಾದ ನಡೆಸಿಕೊಟ್ಟರು. ಒಕ್ಕೂಟದ ಕೋಶಾಧಿಕಾರಿ ಕಮಲಾಗೌಡ ಸ್ವಾಗತಿಸಿದರು. ಪಡಿ ಸಂಸ್ಥೆಯ ಜಿಲ್ಲಾ ಸಂಯೋಜಕಿ ಜಯಂತಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಉಷಾ ನಾಕ್ ಆಶಯಗೀತೆ ಹಾಡಿದರು. ಮಂಗಳೂರು ರಿಯಾಜ್ ಕಾರ್ಯಕ್ರಮ ನಿರೂಪಿಸಿದರು.
*ಬಿಪಿಎಲ್ ಕುಟುಂಬದ ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಮಾತ್ರ ವಿದ್ಯಾರ್ಥಿ ವೇತನ ನೀಡುತ್ತಾರೆ. ಕಲಿಕೆಯ ಆಧಾರದ ಮೇಲೆ ಯಾಕೆ ಕೊಡಬಾರದು?. ಪ್ರತಿಭಾಕಾರಂಜಿಯಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಯಾಕೆ ಅವಕಾಶ ಇಲ್ಲ. ಕಣಚೂರು ಶಾಲೆಯಲ್ಲಿ ಪ್ರತ್ಯೇಕ ವಿಶ್ರಾಂತಿ ಕೋಣೆ ಯಾಕೆ ಇಲ್ಲ.? ಪ್ರತೀ ಬುಧವಾರ ವಿದ್ಯುತ್ ಯಾಕೆ ಕಡಿತಗೊಳಿಸಲಾಗುತ್ತದೆ. ಇದರಿಂದ ಸ್ಮಾರ್ಟ್ ಕ್ಲಾಸ್‌ಗೆ ತೊಂದರೆಯಾಗುತ್ತದೆ. ಸರಕಾರಿ ಶಾಲೆಯಲ್ಲಿ ಓದುವ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಸರಕಾರಿ ವೈದ್ಯಕೀಯ ಕಾಲೇಜುಗಳನ್ನು ಯಾಕೆ ತೆರೆದಿಲ್ಲ?-ಹೀಗೆ ಹಲವು ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಸಭೆಯ ಮುಂದಿಟ್ಟರು.