ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಸಂದೇಶ ಹರಡಿದರೆ ಕಠಿಣ ಕ್ರಮ

Update: 2019-12-19 06:51 GMT

ಮಂಗಳೂರು, ಡಿ.19: ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವಂತಹ ಸಂದೇಶಗಳನ್ನು ರವಾನಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಈ ರೀತಿಯ ಸಂದೇಶಗಳಿರುವ ವಾಟ್ಸ್‌ಆ್ಯಪ್ ಅಡ್ಮಿನ್‌ಗಳನ್ನು ನೇರವಾಗಿ ಹೊಣೆಗಾರರನ್ನಾಗಿ ಮಾಡಿ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ.

ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಸಂದೇಶಗಳು ಕೆಲವು ಮೊಬೈಲ್ ಸಂಖ್ಯೆಯಿಂದ ಹರಡುತ್ತಿರುವುದು ಕಂಡುಬರುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆ ತೀವ್ರ ನಿಹಾ ವಹಿಸಿದೆ. ಇಂತಹ ಸಂದೇಶಗಳನ್ನು ರವಾನಿಸಿದರೆ ಕಲಂ 153(ಎ), 295 ಭಾ.ದಂ. ಸಂ. ಅಡಿಯಲ್ಲಿ ಅಪರಾಧ ಎಸಗಿದವರ ಹಾಗೂ ಈ ರೀತಿಯ ಸಂದೇಶಗಳು ಇರುವ ಗ್ರೂಪ್ ಅಡ್ಮಿನ್‌ಗಳನ್ನು ನೇರ ಹೊಣೆಗಾರನನ್ನಾಗಿ ಅವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News