ಐದು ಬಂಧನ ಆದೇಶಗಳನ್ನು ರದ್ದುಗೊಳಿಸಿದ ಜಮ್ಮು-ಕಾಶ್ಮೀರ ಉಚ್ಚ ನ್ಯಾಯಾಲಯ

Update: 2019-12-19 15:35 GMT

ಶ್ರೀನಗರ,ಡಿ.19: ಬಂಧಿತ ವ್ಯಕ್ತಿಗಳ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ನಿಂದೀಚಿಗೆ ಜಮ್ಮು-ಕಾಶ್ಮೀರ ಉಚ್ಚ ನ್ಯಾಯಾಲಯವು ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಕನಿಷ್ಠ ಐವರ ಬಂಧನ ಆದೇಶಗಳನ್ನು ರದ್ದುಗೊಳಿಸಿದೆ. ಆಡಳಿತವು ಸಂವಿಧಾನದ ವಿಧಿ 22 (5)ರಡಿ ಅಗತ್ಯವಾಗಿರುವಂತೆ ಬಂಧಿತರಿಗೆ ಅವರ ಬಂಧನಕ್ಕೆ ಕಾರಣಗಳನ್ನು ತಿಳಿಸಿರಲಿಲ್ಲ ಎನ್ನ್ನುವುದು ನ್ಯಾಯಾಲಯದ ವಿಚಾರಣೆಯಲ್ಲಿ ಬಹಿರಂಗಗೊಂಡಿದೆ.

ಬಂಧನಗಳ ವಿರುದ್ಧ ಸಲ್ಲಿಸಲಾಗಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಈ ಆದೇಶಗಳು ಹೊರಬಿದ್ದ ಬಳಿಕ ಬಂಧಿತರನ್ನು ಬಿಡುಗಡೆಗೊಳಿಸಲಾಗಿದೆ. ಕೇಂದ್ರವು ಆ.5ರಂದು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಂಡ ನಂತರದ ವಾರಗಳಲ್ಲಿ ಈ ಬಂಧನಗಳು ನಡೆದಿದ್ದವು.

  ತನ್ನ ಬಂಧನದ ವಿರುದ್ಧ ಪರಿಣಾಮಕಾರಿ ವಾದವನ್ನು ಮಂಡಿಸುವುದು ಬಂಧಿತ ವ್ಯಕ್ತಿಗೆ ಇರುವ ಏಕೈಕ ಅಮೂಲ್ಯ ಹಕ್ಕು ಆಗಿದೆ. ಬಂಧಿತನಿಗೆ ಆತನ ಬಂಧನಕ್ಕೆ ಕಾರಣ ಗೊತ್ತಿದ್ದರೆ ಮಾತ್ರ ಆತ ಇಂತಹ ವಾದವನ್ನು ಮಂಡಿಸಬಹುದು. ಆದರೆ ಇಂತಹ ಯಾವುದೇ ಕಾರಣವನ್ನು ನೀಡಿರದಿರುವುದು ಬಂಧಿತನ ಹಕ್ಕನ್ನು ಉಲ್ಲಂಘಿಸಿದೆ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.

ನ್ಯಾಯಾಲಯವು ಇಂತಹ 300ಕ್ಕೂ ಅಧಿಕ ಹೇಬಿಯಸ್ ಕಾರ್ಪಸ್ ಅರ್ಜಿಗಳ ವಿಚಾಣೆಯನ್ನು ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News