ಶಾಂತಿ ಕಾಪಾಡಲು ಮಾಜಿ ಸಚಿವ ಶಾಸಕ ಯು.ಟಿ.ಖಾದರ್ ಮನವಿ
Update: 2019-12-19 22:20 IST
ಮಂಗಳೂರು : ಕೇಂದ್ರ ಸರಕಾರ ಜಾರಿ ಮಾಡಲು ಉದ್ದೇಶಿಸಿರುವ ಪೌರತ್ವ ಕಾಯ್ದೆಯ ವಿರುದ್ಧ ಪ್ರತಿಭಟನಾ ನಿರತರಿಗೆ ಗೋಲಿಬಾರ್ ನಡೆಸಿದ ಮಂಗಳೂರು ಪೋಲೀಸರ ನಡೆಗೆ ಶಾಸಕ ಯು.ಟಿ.ಖಾದರ್ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಪ್ರತಿಭಟನನಿರತರಿಗೆ ಲಾಠಿಚಾರ್ಜ್ ಮಾಡಬಾರದಾಗಿ ಮುಖ್ಯಮಂತ್ರಿಗಳ ಆದೇಶವಿದ್ದರೂ ಕೂಡಾ ಗೋಲಿಬಾರ್ ಹೇಗಾಯಿತು ಎಂಬುದಾಗಿ ಉನ್ನತ ಮಟ್ಟದ ತನಿಖೆಯಾಗಬೇಕೇಂದು ಯು.ಟಿ.ಖಾದರ್ ತಿಳಿಸಿದರು.
ಮಂಗಳೂರಿನ ಜನತೆ ಮಂಗಳೂರಿನ ಸೌಹಾರ್ದತೆಗಾಗಿ ಎಲ್ಲರೂ ಶಾಂತಿ ಕಾಪಾಡಬೇಕೆಂದು ಮನವಿ ಮಾಡಿದರು.
ಗೋಲಿಬಾರ್ ನಿಂದ ಮೃತರಾದ ಹಾಗೂ ಗಾಯಾಳುಗಳ ಕುಟುಂಬಗಳಿಗೆ ಸೂಕ್ತ ಪರಿಹಾರವನ್ನು ಒದಗಿಸಿ, ಪೋಲೀಸರ ಕ್ರಮದ ಬಗ್ಗೆ ಸೂಕ್ತ ಮಟ್ಟದ ತನಿಖೆ ನಡೆಸಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಚಿವ ಯು.ಟಿ.ಖಾದರ್ ರವರು ಒತ್ತಾಯಿಸಿದ್ದಾರೆ.