ಇಮೇಲ್ ಸಂದೇಶ ಕಳುಹಿಸಿ ವಂಚನೆ: ದೂರು
Update: 2019-12-19 23:37 IST
ಉಡುಪಿ, ಡಿ.19: ಲಯನ್ಸ್ ಕ್ಲಬ್ ಬನ್ನಂಜೆ ಟೈಗರ್ ಕಲ್ಚರಲ್ ಇದರ ಅಧ್ಯಕ್ಷೆ, ಚಿಟ್ಪಾಡಿ ಕಸ್ತೂರ್ಬಾ ನಗರದ ನಿವಾಸಿ ಮಮತಾ ಶೆಟ್ಟಿ(45) ಎಂಬವರ ಅನುಮತಿ ಇಲ್ಲದೆ ಅವರ ಇಮೇಲ್ ಮೂಲಕ ಸಂದೇಶ ಕಳುಹಿಸುವ ಮೂಲಕ ವಂಚನೆ ಎಸಗಿರುವುದಾಗಿ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಮತಾ ಶೆಟ್ಟಿಯ ಅನುಮತಿ ಇಲ್ಲದೆ ಮತ್ತು ಅವರ ಗಮನಕ್ಕೆ ಬಾರದೆ ಜು.8ರಂದು ಜಾರ್ಜ್ ಸಾಮ್ಯುವೆಲ್ ಎಂಬವರು ವಿ.ಜೆ.ಶೆಟ್ಟಿ ಎಂಬವರ ಸೂಚನೆಯ ಮೇರೆಗೆ ತಾನೆ ಮಮತಾ ಶೆಟ್ಟಿ ಎಂಬುದಾಗಿ ನಂಬಿಸಿ, ಮಮತಾ ಶೆಟ್ಟಿಯ ಇಮೇಲ್ ಐ.ಡಿ.ಯನ್ನು ಬಳಸಿ, ಲಯನ್ಸ್ ಅಂತಾರಾಷ್ಟ್ರೀಯ ಸಂಸ್ಥೆಯ ಇಮೇಲ್ ಐ.ಡಿಗೆ ಇಮೇಲ್ ಮಾಡಿದ್ದು, ಆ ಮೂಲಕ ಆರೋಪಿ ಗಳು ಮಮತಾ ಶೆಟ್ಟಿಗೆ ಮೋಸ ಹಾಗೂ ವಂಚನೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.