×
Ad

ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಆಸ್ಪತ್ರೆಗೆ ದಾಖಲು

Update: 2019-12-20 09:00 IST

ಉಡುಪಿ: ಅನಾರೋಗ್ಯದಿಂದ ಉಡುಪಿ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಇಂದು ಬೆಳಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಗುರುವಾರ ತಡರಾತ್ರಿ ಸೋಡಿಯಂ ಕೊರತೆಯಿಂದ ಉಂಟಾದ ಉಸಿರಾಟದ ಸಮಸ್ಯೆಯಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಪೇಜಾವರ ಶ್ರೀ, ರಕ್ತದ ಚಲನೆಯಲ್ಲಿ ದಿಢೀರ್ ವ್ಯತ್ಯಾಸದ  ಹಿನ್ನೆಲೆಯಲ್ಲಿ ಕೆಎಂಸಿಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ. 

ಇಂದು ಮುಂಜಾನೆ ಮಣಿಪಾಲ ಕೆಎಂಸಿಗೆ ದಾಖಲಾದ ಪೇಜಾವರ ಶ್ರೀ ಐಸಿಯುನಲ್ಲಿ‌‌ ಚಿಕಿತ್ಸೆ ನೀಡುತ್ತಿರುವ ವೈದ್ಯರು
ಶ್ರೀಗಳಿಗೆ ನ್ಯುಮೋನಿಯಾ ಸಮಸ್ಯೆ ಎಂದು ತಿಳಿಸಿದ್ದು, ಚಿಕಿತ್ಸೆಯ ಬಳಿಕ ಅವರು ಚೇತರಿಸಿಕೊಂಡಿದ್ದಾರೆ. 24 ಗಂಟೆಗಳ ಕಾಲ ಯಾರಿಗೂ ಭೇಟಿ ಕೊಡಲು ಅವಕಾಶ‌ ಇಲ್ಲ ಎಂದು ತಿಳಿಸಿರುವುದಾಗಿ ಮಾಹಿತಿ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News