ಮಂಗಳೂರು : ಕೇರಳ ಮೂಲದ ಅನುಮಾನಾಸ್ಪದ ವ್ಯಕ್ತಿಗಳು ಪೊಲೀಸ್ ವಶಕ್ಕೆ
Update: 2019-12-20 09:28 IST
ಮಂಗಳೂರು : ಕೇರಳ ಮೂಲದ ಸುಮಾರು ಐವತ್ತು ಮಂದಿಯನ್ನು ಶುಕ್ರವಾರ ಬೆಳಗ್ಗೆ ನಗರದ ವೆನ್ ಲಾಕ್ ಆಸ್ಪತ್ರೆ ಬಳಿಯಿಂದ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಗುರುವಾರ ಪೊಲೀಸರ ಗುಂಡಿಗೆ ಬಲಿಯಾದ ಇಬ್ಬರ ಮೃತದೇಹಗಳನ್ನು ವೆನ್ ಲಾಕ್ ಶವಾಗಾರದಲ್ಲಿ ಇರಿಸಲಾಗಿದೆ. ಶುಕ್ರವಾರ ಮುಂಜಾನೆ ಮಾಧ್ಯಮದವರು ಎಂದು ಹೇಳಿಕೊಂಡು ವೆನ್ ಲಾಕ್ ಆಸ್ಪತ್ರೆ ಬಳಿ ಕೆಲವರು ಸೇರಿದ್ದರು ಎಂದು ಹೇಳಲಾಗಿದೆ. ಆದರೆ ಪೊಲೀಸರು ವಿಚಾರಿಸುವಾಗ ಅವರ ಬಳಿ ಸರಿಯಾದ ಗುರುತು ಚೀಟಿಗಳು ಇರಲಿಲ್ಲ ಎಂದು ತಿಳಿದು ಬಂದಿದೆ. ಹಾಗಾಗಿ ಅವರ ಬಗ್ಗೆ ಸಂಶಯಗೊಂಡ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ತಿಳಿದು ಬಂದಿಲ್ಲ.