Breaking News ಪೇಜಾವರಶ್ರೀ ಗಂಭೀರ, ವೆಂಟಿಲೇಟರ್ ನಲ್ಲಿ ಚಿಕಿತ್ಸೆ
Update: 2019-12-20 10:46 IST
ಉಡುಪಿ : ಉಸಿರಾಟದ ತೊಂದರೆಗಾಗಿ ಪೇಜಾವರಶ್ರೀಯನ್ನು ಇಂದು ಮುಂಜಾನೆ 5 ಗಂಟೆಗೆ ಖಾಸಗಿ ಆಸ್ಪತ್ರೆಯಿಂದ ಕೆಎಂಸಿಗೆ ಕರೆ ತರಲಾಗಿದ್ದು, ಇಲ್ಲಿ ಅವರಿಗೆ ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸ್ಥಿತಿ ಗಂಭೀರವಾಗಿದ್ದು, ಸದ್ಯ ನ್ಯುಮೋನಿಯಾಕ್ಕೆ ಆಂಟಿಬಯಾಟಿಕ್ ಹಾಗೂ ಸೂಕ್ತ ಇತರ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಣಿಪಾಲ ಕೆಎಂಸಿ 10 ಗಂಟೆಗೆ ಬಿಡುಗಡೆಗೊಳಿಸಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.