×
Ad

ಬೆಳ್ತಂಗಡಿ : ಮಿನಿ ಬಸ್ ಪಲ್ಟಿಯಾಗಿ 18 ಮಂದಿಗೆ ಗಾಯ

Update: 2019-12-20 18:56 IST

ಬೆಳ್ತಂಗಡಿ : ಚಾರ್ಮಾಡಿ ಚೆಕ್‍ ಪೋಸ್ಟ್ ಸಮೀಪ ಬೀಟಿಗೆ ಎಂಬಲ್ಲಿ ಸೊಲ್ಲಾಪುರ ಮೂಲದ ಪ್ರವಾಸಿಗರ ಮಿನಿ ಬಸ್ಸೊಂದು ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿ ಬಿದ್ದು 18 ಮಂದಿ ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ.

ಮಹಾರಾಷ್ಟ್ರದ ಸೊಲ್ಲಾಪುರ ಮೊಹಲ್ ಹಾಗೂ ಬಿಜಾಪುರದ 2 ಕುಟುಂಬದ 4 ವರ್ಷದ ಮಗು ಸಹಿತ 18 ಮಂದಿ ಗಾಯಗೊಂಡು ಕಕ್ಕಿಂಜೆ ಆಸ್ಪತ್ರೆ ಹಾಗೂ ಉಜಿರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದೇವತಾ(49), ರತನ್(50), ಮಹಾನಂದಾ(50), ಶ್ರೀಶೈಲಿಯಾ (20) ಹೆಚ್ಚಿನ ಗಾಯಗೊಂಡು ಉಜಿರೆ ಖಾಸಗಿ ಆಸ್ಪತ್ರೆ ದಾಖಲಾಗಿದ್ದಾರೆ.

ಚಾಲಕ ಶಂಕರ್(25) ಬೇಬಿ ರಕ್ಷಾ(4), ಸೌದಾಗರ್(30), ನಂದ ಮಲ್ಲಿಕಾರ್ಜುನ(67), ಬಾಪೂ ರಾವ್(65), ಬಾಬೂ ರಾವ್(55), ಉಷಾ ಸಿದ್ದೇಶ್ವರ (67), ಗುರುಪಾದ್(32), ಸುಧಾ ಪಾಟೀಲ್(22), ಶೋಭಾ ಸಿದ್ದೇಶ್ (57), ಹರೀಶ್ಚಂದ್ರ ಬಾವೂಕರ್(58), ಸಿದ್ದೇಶ್ವರ ಬಾವೂಕರ್(67), ಮಲ್ಲಿಕಾರ್ಜುನ (70), ಸಿದ್ದೇಶ್ವರ ರಾಮಚಂದ್ರ (67) ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಕಕ್ಕಿಂಜೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

12 ದಿನಗಳ ಪ್ರವಾಸ

ಎರಡು ಕಟುಂಬಗಳು 12 ದಿನದ ಕರ್ನಾಟಕ ಪ್ರವಾಸಕ್ಕೆಂದು ಬೇಕಾದ ಬಟ್ಟೆ, ಅಡುಗೆ ಪರಿಕರ, ಗ್ಯಾಸ್ ಸಹಿತ ಹೊರಟಿದ್ದರು. ಬೇಲೂರಿಂದ ಧರ್ಮಸ್ಥಳಕ್ಕೆ ಹೊರಟಿದ್ದು, ಮಾರ್ಗ ಮಧ್ಯೆ ಕಕ್ಕಿಂಜೆಯ ಬೀಟಿಗೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಶುಕ್ರವಾರ  ಗದ್ದೆಗೆ ಉರುಳಿದೆ. ಬಸ್ ಮಗುಚಿದ ರಭಸಕ್ಕೆ ಸಂಪೂರ್ಣ ಬುಡಮೇಲಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News