ಕಣ್ಣಂಗಾರ್ ಸಮಸ್ತೆ ಶೈಕ್ಷಣಿಕ ಸಮ್ಮೇಳನ ಮುಂದೂಡಿಕೆ
Update: 2019-12-20 21:57 IST
ಪಡುಬಿದ್ರಿ: ಶಂಸುಲ್ ಉಲಮಾ ಅಕಾಡೆಮಿಯು ಕಣ್ಣಂಗಾರ್ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಡಿ. 22ರಂದು ಅಯೋಜಿಸಿರುವ ಸಮಸ್ತ ಶೈಕ್ಷಣಿಕ ಮಹಾ ಸಮ್ಮೇಳನವನ್ನು ದಕ್ಷಿಣ ಕನ್ನಡ ಜಿಲ್ಲೆಯ ವಾತಾವರಣದ ಕಾರಣದಿಂದ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
ಅಹ್ವಾನಿತರು, ಭಾಗವಹಿಸಲಿರುವ ಪ್ರತಿನಿಧಿಗಳು ಸಹಕರಿಸಬೇಕೆಂದು ಸ್ವಾಗತ ಸಮಿತಿಯ ಅಧ್ಯಕ್ಷ ಶಂಸುದ್ದೀನ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.