ಮಂಗಳೂರಿನಲ್ಲಿ ಇಂದು ಸಂಜೆ 3 ರಿಂದ 6ಗಂಟೆಯ ವರೆಗೆ ಕರ್ಫ್ಯೂ ಇಲ್ಲ : ಸಿಎಂ ಯಡಿಯೂರಪ್ಪ
Update: 2019-12-21 13:46 IST
ಮಂಗಳೂರು : ನಗರದಲ್ಲಿ ಗುರುವಾರ ನಡೆದ ಹಿಂಸಾಚಾರ ಘಟನೆಗೆ ಸಂಬಂಧಿಸಿ ಹೇರಲಾದ ಕರ್ಫ್ಯೂವನ್ನು ಇಂದು ಸಂಜೆ 3ರಿಂದ 6 ಗಂಟೆಯವರೆಗೆ ಸಡಿಲಿಕೆ ಮಾಡಲಾಗಿದೆ ಎಂದು ಸಿಎಂ ಯಡಿಯೂರಪ್ಪ ಅವರು ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರವಿವಾರ ಬೆಳಗ್ಗೆ 6 ರಿಂದ ಕರ್ಫ್ಯೂ ತೆಗೆಯಲಾಗುವುದು ಮತ್ತೆ ರಾತ್ರಿ ಕರ್ಫ್ಯೂ ಹೇರಲಾಗುವುದು ಎಂದು ಯಡಿಯೂರಪ್ಪ ಅವರು ಮಾಹಿತಿ ನೀಡಿದರು.