×
Ad

ಪೇಜಾವರಶ್ರೀಯನ್ನು ಭೇಟಿಯಾದ ಡಾ.ವಿರೇಂದ್ರ ಹೆಗ್ಗಡೆ

Update: 2019-12-21 14:52 IST

ಉಡುಪಿ: ಪೇಜಾವರಶ್ರೀ ಐಸಿಯುನಲ್ಲಿದ್ದು, ಅವರನ್ನು ನೋಡಿ ಬಂದಿದ್ದೇನೆ, ನಿಧಾನವಾಗಿ ಚೇತರಿಸುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ಅವರು ತಿಳಿಸಿದ್ದಾರೆ. 

ಅವರ ವಯೋಧರ್ಮ ಪ್ರಕಾರ ಸ್ಪಂದನೆ ನಿಧಾನ ಗತಿಯಲ್ಲಿದೆ. ಸ್ವಾಮೀಜಿಗೆ ಬೇರೆ ಯಾವುದೇ ಖಾಯಿಲೆ, ಅಡ್ಡ ರೋಗ ಇಲ್ಲ
ಚಿಕಿತ್ಸೆಗೆ ನಿಧಾನವಾಗಿ ಸ್ಪಂದಿಸುತ್ತಿದ್ದಾರೆ. ಸ್ವಾಮೀಜಿಗೆ ಶೀಘ್ರ ಆರೋಗ್ಯ ವೃದ್ಧಿಯಾಗಲಿ. ಇಡೀ ದೇಶ ಅವರಿಗಾಗಿ ಪ್ರಾರ್ಥನೆ ಮಾಡುತ್ತಿದೆ. ಅವರು ಸದಾ ದೇವರ ಸಾನಿಧ್ಯದಲ್ಲೇ ಇದ್ದವರು. ದೇವರು ಅವರನ್ನು ಶೀಘ್ರ ಗುಣಮುಖ ಮಾಡುತ್ತಾರೆ ಎಂಬ ವಿಶ್ವಾಸ ನಮ್ಮೆಲ್ಲರಲ್ಲಿದೆ. ಅಗತ್ಯ ಇಲ್ಲದ ಅಪಪ್ರಚಾರ ಬೇಡ. ಯಾರೂ ಮನಸ್ಸನ್ನು ವ್ಯಸ್ತ ಮಾಡಿಕೊಳ್ಳಬೇಡಿ. ಕೆಟ್ಟ ಸಂದೇಶ ಬರಲ್ಲ, ಒಳ್ಳೆ ಸಂದೇಶ ಬರುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News