ಹೆಜ್ಜೇನು ದಾಳಿ: ಕೃಷಿಕ ಮೃತ್ಯು
Update: 2019-12-21 22:17 IST
ಬೈಂದೂರು, ಡಿ. 21: ಬಿಜೂರು ಗ್ರಾಮದ ಕಂಚಿಕಾನ್ ಎಂಬಲ್ಲಿ ಹೆಜ್ಜೇನು ವಿನ ಹಿಂಡುವಿನ ದಾಳಿಗೆ ಒಳಗಾಗಿ ಗಂಭೀರ ಸ್ಥಿತಿಯಲ್ಲಿದ್ದ ಕೃಷಿಕರೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಕಂಚಿಕಾನ್ ನಿವಾಸಿ ಕುಷ್ಟು ದೇವಾಡಿಗ(59) ಎಂದು ಗುರುತಿಸ ಲಾಗಿದೆ. ಇವರು ಡಿ.18ರಂದು ಗದ್ದೆಯಲ್ಲಿ ನೆಲಗಡಲೆ ಬೀಜ ಹಾಕುತ್ತಿದ್ದಾಗ ಹೆಜ್ಜೇನುವಿನ ಹಿಂಡು ದಾಳಿ ಮಾಡಿ ಕಚ್ಚಿತ್ತೆನ್ನಲಾಗಿದೆ. ಇದರಿಂದ ಕುತ್ತಿಗೆ, ಮುಖ, ತಲೆಗಳಿಗೆ ವಿಪರೀತ ನೋವು ಉಂಟಾಗಿದ್ದು, ಕೂಡಲೇ ಅವರನ್ನು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು.ಆದರೆ ಗಂಭೀರ ಸ್ಥಿತಿಯಲ್ಲಿದ್ದ ಅವರು ಡಿ.21ರಂದು ಬೆಳಗ್ಗೆ 8.10ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.