×
Ad

ಮಂಗಳೂರಿನಲ್ಲಿ ಹಿಂಸಾಚಾರ : ದಾರಿಮಿ ಉಲಮಾ ಒಕ್ಕೂಟ ಖಂಡನೆ

Update: 2019-12-21 22:46 IST

ಮಂಗಳೂರು, ಡಿ.21: ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ವ್ಯಕ್ತವಾಗುತ್ತಿರುವ ಮಧ್ಯೆಯೇ ದ.ಕ.ಜಿಲ್ಲೆಯಲ್ಲಿ ನಡೆಯುವ ದುರ್ಘಟನೆಗಳನ್ನು ಕರ್ನಾಟಕ ರಾಜ್ಯ ದಾರಿಮಿ ಉಲಮಾ ಒಕ್ಕೂಟವು ಖಂಡಿಸಿದೆ.

ದ.ಕ.ಜಿಲ್ಲಾಡಳಿತವನ್ನು ವಿವಿಧ ಸಂಘಟನೆಗಳು ಸಂಪರ್ಕಿಸಿ ಕಾನೂನಾತ್ಮಕ ಪ್ರತಿಭಟನೆ ನಡೆಸಲು ಅವಕಾಶ ಕೇಳಿಕೊಂಡರೂ ಪೊಲೀಸರು ಅದಕ್ಕೆ ಅನುಮತಿ ನಿರಾಕರಿಸಿ ಜನರನ್ನು ಆಕ್ರೋಶಿತರನ್ನಾಗಿಸಿದರು. ಹಾಗಾಗಿ ಸ್ವಯಂ ಪ್ರೇರಿತರಾಗಿ ಸಮಾಧಾನದಿಂದ ಪ್ರತಿಭಟನೆ ನಡೆಸಲು ಮುಂದಾದ ನೂರಕ್ಕಿಂತಲೂ ಕಡಿಮೆಯಲ್ಲಿದ್ದ ಜನರ ಮೇಲೆ ಯದ್ವಾತದ್ವಾ ಲಾಠಿ ಬೀಸಿ, ಯಾವುದೇ ಹಿಂಸೆಗೆ ಇಳಿಯದವರ ಮೇಲೂ ಗೋಲಿಬಾರು ಮಾಡಿದ್ದಾರೆ. ಈ ಘಟನೆಯ ಸಾಕ್ಷವನ್ನು ಪೊಲೀಸರು ಮರೆಮಾಚಿದ್ದಾರೆ. ಹಾಗಾಗಿ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಘಟನೆಯ ಸತ್ಯಾಸತ್ಯತೆಯನ್ನು ಬಯಲಿಗೆಳೆಯಬೇಕು, ಸಂತ್ರಸ್ತರಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದ ದಾರಿಮಿ ಉಲಮಾ ಒಕ್ಕೂಟ, ಸಂವಿಧಾನಾತ್ಮಕವಾಗಿ ಪ್ರತಿಭಟನೆಗೆ ಅನುಮತಿ ನೀಡದಿದ್ದರೆ ಬೃಹತ್ ಚಳುವಳಿ ನಡೆಸಲಾಗುವುದು ಎಂದು ಎಚ್ಚರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News