ಇದ್ಲಿಬ್‌ನಲ್ಲಿ ವಾಯುದಾಳಿಗೆ ಕನಿಷ್ಠ 12 ನಾಗರಿಕರ ಬಲಿ

Update: 2019-12-22 18:25 GMT

ಬೈರೂತ್,ಡಿ.22: ಸಿರಿಯ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಅವರಿಗೆ ನಿಷ್ಠವಾಗಿರುವ ಸೇನಾಪಡೆಗಳು ಹಾಗೂ ಮಿತ್ರ ರಾಷ್ಟ್ರವಾದ ರಶ್ಯದ ಸೇನೆ ಶನಿವಾರ ಬಂಡುಕೋರರ ಕಟ್ಟಕಡೆಯ ಭದ್ರಕೋಟೆಗಳಲ್ಲೊಂದೆನಿಸಿದ ಇದ್ಲಿಬ್ ಪ್ರಾಂತದಲ್ಲಿ ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ 12 ಮಂದಿ ಸಾವನ್ನಪ್ಪಿದ್ದಾರೆ. ಸಮರ ಉಲ್ಬಣಿಸಿರುವ ಹಿನ್ನೆಲೆಯಲ್ಲಿ ಭಯಭೀತರಾದ ಸಾವಿರಾರು ನಾಗರಿಕರು ಪಲಾಯನಗೈದಿದ್ದಾರೆಂದು ವರದಿಗಳು ತಿಳಿಸಿವೆ.

 ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಅವರ ಪಡೆಗಳು ಈ ತಿಂಗಳು ಇದ್ಲಿಬ್‌ನ ವಾಯವ್ಯ ಪ್ರದೇಶದಲ್ಲಿ ಬಾಂಬ್ ದಾಳಿಗಳನ್ನು ತೀವ್ರಗೊಳಿಸಿವೆ. ಶನಿವಾರ ಸರಾಕೆಬ್ ನಗರದಲ್ಲಿ ಯುದ್ಧವಿಮಾನಗಳ ಬಾಂಬ್ ದಾಳಿಗೆ ಎಂಟು ನಾಗರಿಕರು ಸಾವನ್ನಪ್ಪಿದ್ದಾರೆ. ದಕ್ಷಿಣ ಇದ್ಲಿಬ್‌ನ ಇತರ ನಗರಗಳಲ್ಲಿ ನಡೆದ ಪ್ರತ್ಯೇಕ ವಾಯುದಾಳಿಗಳಲ್ಲಿ ಇತರ ನಾಲ್ವರು ಸಾವನ್ನಪ್ಪಿದ್ದಾರೆಂದು ಮಾನವಹಕ್ಕುಗಳ ಕುರಿತ ಸಿರಿಯದ ವೀಕ್ಷಣಾಸಂಸ್ಥೆ ಹೇಳಿಕೆಯೊಂದರಲ್ಲಿ ತಿಳಿಸಿದೆ. ಈ ದಾಳಿಗಳಲ್ಲಿ ಒಟ್ಟು 36 ಮಂದಿ ಗಾಯಗೊಂಡಿದ್ದಾರೆಂದು ಅದು ಹೇಳಿದೆ.

 ಇದ್ಲಿಬ್ ಪ್ರಾಂತದಲ್ಲಿ ಅಸ್ಸಾದ್ ಸರಕಾರಕ್ಕೆ ನಿಷ್ಠವಾಗಿರುವ ಪಡೆಗಳು ಹಾಗೂ ಬಂಡುಕೋರರ ನಡುವೆ ನಡೆಯುತ್ತಿರುವ ಕಳೆದ ಮೂರು ದಿನಗಳಿಂದ ಭೀಕರ ಸಂಘರ್ಷ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News