ಕಾರ್ಕಳ: ಮಹಿಳೆಯ ಅಪಹರಿಸಿ ಕೊಲೆ; ಮೃತದೇಹ ಬಾವಿಯಲ್ಲಿ ಪತ್ತೆ
Update: 2019-12-23 00:30 IST
ಕಾರ್ಕಳ: ಮಹಿಳೆಯೊಬ್ಬರನ್ನು ದುಷ್ಕರ್ಮಿಗಳು ಅಪಹರಿಸಿ ಕೊಲೆಗೈದು ಮೃತದೇಹವನ್ನು ಕಲ್ಯಾ ಗ್ರಾಮದ ಮೂಡುಮನೆ ಶಕುಂತಲಾ ಎಂಬವರ ಬಾವಿಗೆ ಎಸೆದಿರುವ ಘಟನೆ ಡಿಸೆಂಬರ್ 22 ರಂದು ರಾತ್ರಿ ಬೆಳಕಿಗೆ ಬಂದಿದೆ.
ಕೊಲೆಗೀಡಾದ ವರನ್ನು ಬೆಳ್ಮಣ್ ಗ್ರಾಮದ ಬೃಂದಾವನ ಮನೆ ನಿವಾಸಿ ಭರತ ಲಕ್ಷ್ಮಿ ಉಡುಪ (68) ಎಂದು ಗುರುತಿಸಲಾಗಿದೆ.
ಇವರನ್ನು ದುಷ್ಕರ್ಮಿಗಳು ಎಇ.20ರಂದು ಲಾಭಕ್ಕಾಗಿ ಕೊಲೆ ಮಾಡುವ ಉದ್ದೇಶದಿಂದ ಅಪಹರಿಸಿ ಎಲ್ಲಿಯೋ ಕೊಲೆ ಮಾಡಿ ಪ್ಲಾಸ್ಟಿಕ್ ಟರ್ಪಲ್ ನಲ್ಲಿ ಕಟ್ಟಿ ಮೃತ ದೇಹವನ್ನು ಶಕುಂತಲಾ ಎಂಬವರ ಮನೆಯ ಬಾವಿಗೆ ತಂದು ಹಾಕಿರುವುದಾಗಿದೆ ಎಂದು ದೂರಲಾಗಿದೆ
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ