ಜಲೀಲ್ ನಿವಾಸಕ್ಕೆ ಯುಡಿಎಫ್ ನಿಯೋಗ ಭೇಟಿ
Update: 2019-12-23 14:13 IST
ಮಂಗಳೂರು, ಡಿ.23: ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಗರದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಗುರುವಾರ ನಡೆದ ಹಿಂಸಾಚಾರದ ಸಂದರ್ಭ ಗೋಲಿಬಾರ್‌ಗೆ ಬಲಿಯಾದ ಬಂದರ್ ಕಂದುಕ ನಿವಾಸಿ ಅಬ್ದುಲ್ ಜಲೀಲ್ ಅವರ ನಿವಾಸಕ್ಕೆ ಕೇರಳದ ಯುಡಿಎಫ್ ನಿಯೋಗ ಸೋಮವಾರ ಭೇಟಿ ನೀಡಿತು.
ಕಾಸರಗೋಡು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಕಣ್ಣೂರು ಸಂಸದ ಕೆ.ಸುಧಾಕರನ್, ಮಂಜೇಶ್ವರ ಶಾಸಕ ಎಂ.ಸಿ. ಖಮರುದ್ದೀನ್, ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು, ಶಾಸಕರಾದ ಪಾರಕ್ಕಲ್ ಅಬ್ದುಲ್ಲ, ಶಂಸುದ್ದೀನ್‌ರನ್ನು ಒಳಗೊಂಡ ನಿಯೋಗವು ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿತು.