×
Ad

ನಾಳೆಯಿಂದ ಚಿಕಿತ್ಸೆಯಲ್ಲಿ ಬದಲಾವಣೆ: ಪೇಜಾವರ ಕಿರಿಯ ಶ್ರೀ

Update: 2019-12-23 20:45 IST

ಉಡುಪಿ, ಡಿ.23: ಗುರುಗಳ ಆರೋಗ್ಯ ಸ್ಥಿರವಾಗಿದ್ದು, ಇಂದು ರಾತ್ರಿ ಎಂಆರ್‌ಐ ಸ್ಕಾನ್ ಮಾಡಿ, ಅದರ ವರದಿಯ ಆಧಾರದ ಮೇಲೆ ವೈದ್ಯರು ನಾಳೆಯಿಂದ ಚಿಕಿತ್ಸೆಯ ವಿಧಾನವನ್ನು ಬದಲಾಯಿಸುವ ಸಾಧ್ಯತೆಗಳಿವೆ ಎಂದು ಪೇಜಾವರ ಮಠದ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತ ನಾಡಿದ ಅವರು, ಡಿ.22ರಂದು ಗುರುಗಳಿಗೆ ಎಕ್ಸ್‌ರೇ ಮತ್ತು ಸ್ಕಾನ್ ಮಾಡ ಲಾಗಿದೆ. ಎಂಆರ್‌ಐ ಸ್ಕಾನ್ ಮಾಡಿದ ಬಳಿಕ, ಮುಂದೆ ಯಾವ ರೀತಿ ಚಿಕಿತ್ಸೆ ನೀಡಬೇಕೆಂಬುದರ ಬಗ್ಗೆ ವೈದ್ಯರು ನಿರ್ಣಯ ತೆಗೆದುಕೊಳ್ಳಲಿದ್ದಾರೆ. ಬೆಂಗಳೂರಿನಿಂದ ಇಬ್ಬರು ತಜ್ಞ ವೈದ್ಯರು ಬಂದಿದ್ದು, ದೆಹಲಿಯ ಏಮ್ಸ್‌ನ ತಜ್ಞ ವೈದ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News