×
Ad

ಮಂಗಳೂರು ಗೋಲಿಬಾರ್ ಪ್ರಕರಣ: ಉಳ್ಳಾಲದ ಕೌನ್ಸಿಲರ್‌ಗಳಿಂದ ಸಿದ್ದರಾಮಯ್ಯರಿಗೆ ಮನವಿ

Update: 2019-12-23 20:51 IST

ಮಂಗಳೂರು, ಡಿ.23: ಸೋಮವಾರ ಮಂಗಳೂರಿಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಉಳ್ಳಾಲ ನಗರಸಭೆಯ ವಿವಿಧ ಪಕ್ಷಗಳ ಕೌನ್ಸಿಲರ್‌ಗಳುಮಂಗಳೂರು ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ನಡೆಸಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಗೋಲಿಬಾರ್‌ನಲ್ಲಿ ಮೃತಪಟ್ಟವರ ವಿರುದ್ಧ ಪೊಲೀಸರು ದಾಖಲಿಸಿದ್ದ ಪ್ರಕರಣ ಕೈ ಬಿಡಬೇಕು, ಕೋಮುವಾದಿ ಪೊಲೀಸರನ್ನು ಎತ್ತಂಗಡಿ ಮಾಡಬೇಕು, ಪೊಲೀಸ್ ಕಮಿಷನರ್ ವಿರುದ್ಧ ಮತ್ತು ಗುಂಡೇಟು ಮಾಡಿದ ಪೊಲೀಸರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕೌನ್ಸಿಲರ್‌ಗಳು ಒತ್ತಾಯಿಸಿದರು.

ಈ ಸಂದರ್ಭ ಕೌನ್ಸಿಲರ್‌ಗಳಾದ ಮುಹಮ್ಮದ್ ಮುಕ್ಕಚ್ಚೇರಿ, ಮುಸ್ತಾಕ್ ಪಟ್ಲ, ಅಬ್ದುಲ್ ಅಝೀಝ್, ಕಮರುನ್ನಿಸಾ ನಿಝಾಮ್, ಬಶೀರ್ ಕಡಪರ, ಯುಎ ಇಸ್ಮಾಯೀಲ್, ಶಹನಾಝ್ ಅಕ್ರಂ ಹಸನ್, ಅಬ್ದುಲ್ ಜಬ್ಬಾರ್, ಕಮರುನ್ನಿಸಾ ಆಸೀಫ್, ಖಲೀಲ್ ಇಬ್ರಾಹೀಂ, ರುಕಿಯಾ ಇಕ್ಬಾಲ್, ಇಬ್ರಾಹೀಂ ಅಶ್ರಫ್, ಝರೀನಾ ರವೂಫ್, ಅಸ್ಗರ್ ಅಲಿ, ರಮೀಝ್ ಕೋಡಿ, ಅಯೂಬ್ ಪಿ., ಬಾಝಿಲ್ ಡಿಸೋಜ, ರವಿಚಂದ್ರ ಗಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News