ಡೆಬಿಟ್ ಕಾರ್ಡ್‌ಗಳ ಸಂಖ್ಯೆಯಲ್ಲಿ ಶೇ.15 ರಷ್ಟು ಕುಸಿತ
ಹೊಸದಿಲ್ಲಿ,ಡಿ.23: ಈ ವರ್ಷದ ಅಕ್ಟೋಬರ್‌ನಲ್ಲಿ ಭಾರತದಲ್ಲಿ ಡೆಬಿಟ್ ಕಾರ್ಡ್‌ಗಳ ಸಂಖ್ಯೆಯಲ್ಲಿ ಕಳೆದ ಎರಡು ವರ್ಷಗಳಲ್ಲೇ ಅತ್ಯಧಿಕ ಕುಸಿತವುಂಟಾಗಿದೆಯೆಂದು ಆಂಗ್ಲ ದಿನಪತ್ರಿಕೆಯೊಂದು ಸೋಮವಾರ ವರದಿ ಮಾಡಿದೆ.
ಈ ವರ್ಷದ ಅಕ್ಟೋಬರ್‌ನಲ್ಲಿ ದೇಶದಲ್ಲಿ ಒಟ್ಟು 84.3 ಕೋಟಿ ಎಟಿಎಂ ಕಾರ್ಡ್‌ಗಳು ಚಾಲ್ತಿಯಲ್ಲಿದ್ದವು. ಕಳೆದ ವರ್ಷ ಇದೇ ಅವಧಿಯಲ್ಲಿ 99.8 ಡೆಬಿಟ್ ಕಾರ್ಡ್‌ಗಳು ಚಲಾವಣೆಯಲ್ಲಿದ್ದವು. ಹೀಗಾಗಿ ಕಳೆದ ಎಡು ವರ್ಷಗಳಲ್ಲಿ ಡೆಬಿಟ್ ಕಾರ್ಡ್‌ಗಳ ಚಲಾವಣೆಯಲ್ಲಿ 15 ಶೇಕಡ ಇಳಿಕೆಯಾಗಿದೆ ಎಂದು ಅದು ವರದಿ ಮಾಡಿದೆ.
ರೂಪೇ/ಮಾಸ್ಟರ್ ಕಾರ್ಡ್/ ವೀಸಾ ಅಥವಾ ಇಎಂವಿ ಮೈಗ್ರೇಶನ್‌ಗಳನ್ನು ಮ್ಯಾಗ್ನೆಟಿಕ್ ಸ್ಟ್ರಿಪ್‌ಗಳಿಂದ ಚೀಪ್ ಆಧಾರಿತವುಗಳನ್ನಾಗಿ ಪರಿವರ್ತಿಸಿದ ಸಂದರ್ಭ ಇಂತಹ 15.50 ಕೋಟಿ ಕಾರ್ಡ್ ಗಳನ್ನು ರದ್ದುಪಡಿಸಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ಆದೇಶದ ಪ್ರಕಾರ ಎಲ್ಲಾ ಬ್ಯಾಂಕ್‌ಗಳು ಹೆಚ್ಟು ಸುರಕ್ಷಿತವಾದ ಇಎಂವಿ ಚಿಪ್ ಆಧಾರಿತ ಕಾರ್ಡ್ ವ್ಯವಸ್ಥೆಯನ್ನು ಆಳವಡಿಸಿಕೊಳ್ಳಬೇಕಿದೆ.
2018ರಲ್ಲಿ ಬ್ಯಾಂಕುಗಳು ಡೆಬಿಟ್ ಕಾರ್ಡ್‌ಗಳನ್ನು ಪುನರ್‌ವಿತರಿಸುವ ಕೆಲಸದಲ್ಲಿ ತೊಡಗಿದವು. ಪ್ರಸಕ್ತ ವೇತನದ ಆಧಾರದಲ್ಲಿ ದುಡಿಯುವ ವೃತ್ತಿಪರರರು ತಮ್ಮ ಕೆಲಸಗಳನ್ನು ಬದಲಾಯಿಸುತ್ತಲೇ ಇರುವುದರಿಂದ ನಿಷ್ಕ್ರಿಯವಾದ ಖಾತೆಗಳಲ್ಲಿ ಹೆಚ್ಚಳವಾಗಿರುವುದಕ್ಕೆ ಕಾರಣವೆಂದು ವರದಿಯು ಹೇಳಿದೆ. ನಗರ ಪ್ರದೇಶದ ಯುವ ಭಾರತೀಯರು ಬ್ಯಾಂಕುಗಳನ್ನು ಬದಲಾಯಿಸುವುದರಿಂದ ಝಿರೋ ಬ್ಯಾಲೆನ್ಸ್ ಖಾತೆಗಳ ಸಂಖ್ಯೆಯಲ್ಲಿ ಏರಿಕೆಯಾಗಲು ಕಾರಣವೆನ್ನಲಾಗಿದೆ.
ನಿಷ್ಕ್ರಿಯವಾಗಿರುವ ಖಾತೆಗಳನ್ನು ಉಳಿಸಿಕೊಳ್ಳುವುದು ಬ್ಯಾಂಕ್‌ಗಳ ಹಿತದೃಷ್ಟಿಯಿಂದ ವಿವೇಕಯುತವಾದುದಲ್ಲವೆಂದು ಪಿಡೆಲಿಟಿ ನ್ಯಾಶನಲ್ ಇನ್‌ಫಾರ್ಮೆಶನ್ ಸರ್ವಿಸ್ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ‘‘ ಇಂತಹ ನಿಷ್ಕ್ರಿಯ ಖಾತೆಗಳನ್ನು ಉಳಿಸಿಕೊಳ್ಳುವುದರಿಂದ ಕಪ್ಪುಹಣ ಬಿಳುಪುಗೊಳಿಸುವಂತಹ ವಂಚನೆಗಳು ಹೆಚ್ಚುವ ಅಪಾಯವಿರುತ್ತದೆ. ಎರಡನೆಯದಾಗಿ ಇಂತಹ ಖಾತೆಗಳನ್ನು ಉಳಿಸಿಕೊಳ್ಳುವ ವೆಚ್ಚವೂ ತಗಲುತ್ತದೆ. ಹೀಗಾಗಿ ಗ್ರಾಹರು ಬೇಡಿಕೆಯನ್ನು ಸಲ್ಲಿಸಿದಯೇ, ಅವರಿಗೆ ಸ್ವಯಂಪ್ರೇರಿತವಾಗಿ ಡೆಬಿಟ್ ಕಾರ್ಡ್‌ಗಳನ್ನು ಒದಗಿಸುವುದನ್ನು ಬ್ಯಾಂಕ್‌ಗಳು ನಿಲ್ಲಿಸಿವೆ’’ಎಂದು ಅವರು ಹೇಳುತ್ತಾರೆ.