×
Ad

ಅಮೆರಿಕದಿಂದ ಬಾಹ್ಯಾಕಾಶ ಪಡೆ ಸೃಷ್ಟಿಗೆ ಟ್ರಂಪ್ ಅಂಕಿತ

Update: 2019-12-23 23:26 IST

ವಾಶಿಂಗ್ಟನ್, ಡಿ. 23: ಬಾಹ್ಯಾಕಾಶದಲ್ಲಿ ಯುದ್ಧ ಮಾಡುವುದಕ್ಕಾಗಿ ಪೂರ್ಣ ಪ್ರಮಾಣದ ಪಡೆಯೊಂದನ್ನು ಸೃಷ್ಟಿಸುವ ಉದ್ದೇಶದ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಸಹಿ ಹಾಕಿದ್ದಾರೆ. ಇದು ಏಳು ದಶಕಗಳ ಅವಧಿಯಲ್ಲಿ ಮೊದಲ ಹೊಸ ಸೇನಾ ಘಟಕವಾಗಿದೆ.

 2018 ಜೂನ್‌ನಲ್ಲಿ ತನ್ನ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಪಡೆಗೆ ಟ್ರಂಪ್ ಆದೇಶ ಹೊರಡಿಸಿದ್ದರು. ಈಗ 738 ಬಿಲಿಯ ಡಾಲರ್ (ಸುಮಾರು 52.59 ಲಕ್ಷ ಕೋಟಿ ರೂಪಾಯಿ) ಮೊತ್ತದ ವಾರ್ಷಿಕ ಸೇನಾ ಬಜೆಟ್‌ಗೆ ಅವರು ಸಹಿ ಹಾಕುವುದರೊಂದಿಗೆ ಅದು ಜಾರಿಗೆ ಬಂದಿದೆ.

ಬಾಹ್ಯಾಕಾಶ ಪಡೆಯು ಅಮೆರಿಕ ಸೇನೆಯ ಆರನೇ ಪಡೆಯಾಗಿದೆ. ಈಗಾಗಲೇ ಭೂಸೇನೆ, ನೌಕಾಪಡೆ, ವಾಯುಪಡೆ, ಮರೀನ್ ಮತ್ತು ಕೋಸ್ಟ್ ಗಾರ್ಡ್ ಪಡೆಗಳು ಸೇವೆಯಲ್ಲಿ ತೊಡಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News