×
Ad

"ಫೈರ್ ಮಾಡಿದ್ರೂ ಒಬ್ಬರೂ ಸಾಯಲಿಲ್ಲ..." ಹೇಳಿಕೆ : ಇನ್ ಸ್ಪೆಕ್ಟರ್ ಶಾಂತಾರಾಮ ಠಾಣಾ ಕರ್ತವ್ಯದಿಂದ ಬಿಡುಗಡೆ

Update: 2019-12-24 11:56 IST

ಮಂಗಳೂರು: 'ಫೈರ್ ಮಾಡಿದ್ರೂ ಒಂದೂ ಗುಂಡು ಕೂಡ ಬೀಳಲಿಲ್ಲ. ಒಬ್ರೂ ಸಾಯಲಿಲ್ಲ" ಎಂದು ಮಂಗಳೂರು ಗೋಲಿಬಾರ್ ಘಟನೆಯ ಸಮಯ ಹೇಳಿದ್ದ ಆರೋಪ ಎದುರಿಸುತ್ತಿರುವ ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಶಾಂತಾರಾಮ ಕುಂದರ್  ರನ್ನು ಠಾಣಾ  ಕರ್ತವ್ಯದಿಂದ ಬಿಡುಗಡೆ ಮಾಡಿ ಆದೇಶ ಹೊರಡಿಸಲಾಗಿದೆ.

ವೈರಲ್ ಆದ ಈ ವಿಡಿಯೋ ಬಗ್ಗೆಯೂ ತನಿಖೆ ನಡೆಯುತ್ತಿದೆ. ಗಾಳಿಯಲ್ಲಿ ಗುಂಡು ಹಾರಿಸಿದರೆ ಮನೆಗಳ ಮಹಡಿಯಲ್ಲಿದ್ದವರಿಗೆ ತಗುಲಬಹುದು ಎಂದು ಕಾನ್ಸ್ ಟೇಬಲ್ ಒಬ್ಬರು ಹೇಳಿದಕ್ಕೆ ಪ್ರತಿಕ್ರಿಯೆ ನೀಡಿದ್ದಾಗಿ ಇನ್ ಸ್ಪೆಕ್ಟರ್ ಶಾಂತಾರಾಮ ವಿವರಣೆ ನೀಡಿದ್ದಾರೆ.

ಈಗ ಅವರನ್ನು ಠಾಣಾ ಕರ್ತವ್ಯದಿಂದ ಬಿಡುಗಡೆ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ ತಿಳಿಸಿದ್ದಾರೆ. ಮುಂದಿನ ಆದೇಶದವರೆಗೆ ಅವರು ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕರ್ತವ್ಯದಲ್ಲಿರುತ್ತಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News