×
Ad

ಪುತ್ತೂರು: ಅಕ್ರಮ ಸಿಡಿಮದ್ದು ತಯಾರಿಸುತ್ತಿದ್ದ ಪ್ರಕರಣ ; ನಾಲ್ಕು ಮಂದಿ ಸೆರೆ

Update: 2019-12-24 12:02 IST

ಪುತ್ತೂರು: ಪರವಾನಿಗೆಯಿಲ್ಲದೆ ಅಕ್ರಮವಾಗಿ ಸ್ಪೋಟಕ ಬಳಸಿ ಸಿಡಿಮದ್ದು ತಯಾರಿ ನಡೆಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿದ ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಕೇರಳ ಮತ್ತು ತಮಿಳುನಾಡು ರಾಜ್ಯದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕಾಸರಗೋಡು ಕೆಳುಗುಡ್ಡೆ ನಿವಾಸಿ ನರೇಂದ್ರ ಆಲಿಯಾಸ್ ಬಾಬು (45), ತ್ರಿಶೂರ್ ಜಿಲ್ಲೆಯು ಚೆಲಕೆರೆ ನಿವಾಸಿ ಟಿ. ಬಾಬು(53), ತಮಿಳುನಾಡಿನ ಟಿ. ಕಾಳಿರಾಜ್(30) ಮತ್ತು ವಿದುರನಗರದ ಎ. ಕಮಲ ಕಣ್ಣನ್(29) ಬಂಧಿತ ಆರೋಪಿಗಳು.

ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಮಡ್ಯಲಮಜಲು ಎಂಬಲ್ಲಿ ಮಹಿಳೆಯೊಬ್ಬರಿಗೆ ಸೇರಿದ ತೋಟದಲ್ಲಿ ಆರೋಪಿಗಳು ಗುಡಿಸಲು ನಿರ್ಮಿಸಿಕೊಂಡು ಅಕ್ರಮವಾಗಿ ಸ್ಪೋಟಕಗಳನ್ನು ಬಳಸಿ ಸಿಡಿಮದ್ದು ತಯಾರಿಸಿ ಸರಬರಾಜು ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಸಂಪ್ಯ ಎಸ್‍ಐ ಸಕ್ತಿವೇಲು ಅವರ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News