ಕಮಿಷನರ್ ಹರ್ಷ, ಇನ್ ಸ್ಪೆಕ್ಟರ್ ಶಾಂತಾರಾಮ ಕುಂದರ್ ಅಮಾನತುಗೊಳಿಸಲು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಒತ್ತಾಯ
Update: 2019-12-24 12:11 IST
ಮಂಗಳೂರು : ಕಮಿಷನರ್ ಹರ್ಷ, ಇನ್ ಸ್ಪೆಕ್ಟರ್ ಶಾಂತಾರಾಮ ಕುಂದರ್ ಅವರನ್ನು ಅಮಾನತುಗೊಳಿಸಲು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.
ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಒತ್ತಾಯಿಸಿದ್ದಾರೆ.
ಮಂಗಳೂರಿನಲ್ಲಿ ನಡೆದ ಹಿಂಸಾಚಾರ ಪ್ರಕರಣದ ಬಗ್ಗೆ ಸಿಐಡಿ ತನಿಖೆ ಸಾಲದು. ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಕಮಿಷನರ್ ಹರ್ಷ ಮತ್ತು ಇನ್ಸ್ ಪೆಕ್ಟರ್ ಶಾಂತಾರಾಮ ಕುಂದರ್ ಸಹಿತ ತಪ್ಪಿತಸ್ಥ ಅಧಿಕಾರಿಗಳು ಕರ್ತವ್ಯದಲ್ಲಿರುವಾಗ ಸೂಕ್ತ ತನಿಖೆ ನಡೆಸಲು ಸಾಧ್ಯವಿಲ್ಲ. ಅವರನ್ನು ಅಮಾನತುಗೊಳಿಸಿದ ಬಳಿಕ ತನಿಖೆ ನಡೆಸಿದರೆ ಅದರಲ್ಲಿ ಪಾರದರ್ಶಕತೆ ಕಾಣಬಹುದು ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಹರೀಶ್ ಕುಮಾರ್, ಐವನ್ ಡಿಸೋಜ, ಮೊಯ್ದಿನ್ ಬಾವ, ಜೆಆರ್ ಲೋಬೊ, ಅಭಯ ಚಂದ್ರ ಜೈನ್, ಇಬ್ರಾಹೀಂ ಕೋಡಿಜಾಲ್ ಮತ್ತಿತರರು ಉಪಸ್ಥಿತರಿದ್ದರು.