×
Ad

ಡಿ. 27ರಿಂದ ಸಅದಿಯ್ಯ ಗೋಲ್ಡನ್ ಜುಬಿಲಿ ಆರಂಭ

Update: 2019-12-24 20:54 IST

ಮಂಗಳೂರು : ಜಾಮಿಅ ಸಅದಿಯ್ಯ ಅರಬಿಯ್ಯ ಕಾಸರಗೋಡು ಇದರ ಸುವರ್ಣ ಮಹೋತ್ಸವ ಗೋಲ್ಡನ್ ಜುಬಿಲಿಯು ಡಿ.27,28,29ರಂದು ನಡೆಯಲಿದೆ.

ಮೂರು ದಿನಗಳಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳ ಉದ್ಘಾಟನೆಯನ್ನು ಕೇರಳ ರಾಜ್ಯಪಾಲರಾದ ಆರಿಫ್ ಮುಹಮ್ಮದ್ ಖಾನ್ ನಿರ್ವಹಿಸುವರು. ಸಯ್ಯಿದ್ ಕೆ ಎಸ್ ಆಟಕ್ಕೋಯ ತಂಙಳ್ ಕುಂಬೋಲ್ ಅಧ್ಯಕ್ಷತೆ ವಹಿಸಲಿದ್ದು ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರ ದುವಾ ನೇರವೇರಿಸುವರು ತಿಳಿಸಲಾಗಿದೆ.

ಪತ್ರಿಕಾ ಗೋಷ್ಠಿಯಲ್ಲಿ  ಸಅದಿಯ್ಯ ಗೋಲ್ಡನ್ ಜುಬಿಲಿ ಪ್ರಚಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಫಿಳ್ ಯಾಕೂಬ್ ಸಅದಿ ನಾವೂರು, ಹಾಜಿ ಅಬ್ದುಲ್ ರಝಾಕ್ ಮಲಾರ್, ಎಂ ಪಿ ಎಂ ಅಶ್ರಫ್ ಸಅದಿ ಮಲ್ಲೂರು, ಇಸ್ಮಾಯಿಲ್ ಸಅದಿ ಉರುಮಣೆ, ಮೊಯಿದೀನ್ ಅಲ್ ಸಫರ್ ಮುಕ್ಕ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News