ಡಿ. 25ರಿಂದ ಮೀನುಗಾರಿಕಾ ಸಚಿವರ ಪ್ರವಾಸ
ಉಡುಪಿ, ಡಿ.24:ರಾಜ್ಯದ ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಡಿ.25ರಿಂದ 28ರವರೆಗೆ ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಡಿ.25ರ ಅಪರಾಹ್ನ 2 ಕ್ಕೆ ಮಂಗಳೂರಿನಿಂದ ಉಡುಪಿಗೆ ಆಗಮಿಸುವ ಸಚಿವರು, 2:30ಕ್ಕೆ ರಾಜಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳೊಂದಿಗೆ ಭಾಗವಹಿಸುವರು. 3:20ಕ್ಕೆ ಕುತ್ಯಾರು, 4:50ಕ್ಕೆ ಪೊಲಿಪು ಕಾರ್ಯಕ್ರಮಗಳಲ್ಲೂ ಅವರು ಭಾಗವಹಿಸಿ ಸಂಜೆ ಮಂಗಳೂರಿಗೆ ತೆರಳುವರು.
ಡಿ.26 ಮತ್ತು 27ರಂದು ಬೆಳಗ್ಗೆ 8 ರಿಂದ ಕೋಟತಟ್ಟು ಗ್ರಾಪಂ ವತಿ ಯಿಂದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯಾಡಳಿತ ಪ್ರತಿನಿಧಿಗಳ ಕ್ರೀಡೋತ್ಸವ-ಸಾಂಸ್ಕೃತಿಕ ಸ್ಪರ್ಧೆಗಳ ‘ಹೊಳಪು- 2019’ ಪೂರ್ವಭಾವಿ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಡಿ.28ರಂದು ಬೆಳಗ್ಗೆ 8 ರಿಂದ ಕೋಟದ ವಿವೇಕ ಹೈಸ್ಕೂಲ್ ಆವರಣದಲ್ಲಿ ಕೋಟತಟ್ಟು ಗ್ರಾಪಂ ವತಿಯಿಂದ ನಡೆಯುವ ಹೊಳಪು-2019ರಲ್ಲಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.