×
Ad

ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿ ಸೆರೆ

Update: 2019-12-24 22:53 IST

ಪಡುಬಿದ್ರಿ: 5ನೇ ತರಗತಿಯ ಬಾಲಕಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ವ್ಯಕ್ತಿಯೋರ್ವರನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಅದಮಾರು ರೈಲ್ವೇ ಗೇಟ್ ಬಳಿಯ ನಿವಾಸಿ ಲಕ್ಷ್ಮೀನಾರಾಯಣ ಭಟ್ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಫೋಕ್ಸೋ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.

ಬಾಲಕಿ ಪ್ರತಿ ದಿನ ಶಾಲೆ ಮುಗಿಸಿ ಟ್ಯೂಷನ್ ಮಗಿಸಿ ಮನೆಗೆ ಹೋಗಿ ಬಳಿಕ ತಿಂಡಿ ತರಲು ಲಕ್ಷ್ಮೀನಾರಾಯಣ ಭಟ್ ಅವರ ಹೊಟೇಲ್ ಮತ್ತು ಅಂಗಡಿಗೆ ಹೋಗುತ್ತಿದ್ದು, ಲಕ್ಷ್ಮೀನಾರಾಯಣ ಭಟ್ ಆಕೆಯನ್ನು ಹೋಟೆಲ್‍ನ ಅಡುಗೆ ಮನೆಗೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡುತಿದ್ದ ಎನ್ನಲಾಗಿದ್ದು, ಈ ವಿಚಾರ ಮನೆಯಲ್ಲಿ ಹೇಳಿದರೆ ನಿನ್ನನ್ನು ಮತ್ತು ತಾಯಿಯನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದನು ಎನ್ನಲಾಗಿದ್ದು, ಈ ಬಗ್ಗೆ ಬಾಲಕಿಯ ತಾಯಿ ಪಡುಬಿದ್ರಿ ಠಾಣೆಗೆ ದೂರು ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News