ಬ್ಯಾಂಕ್ ದರೋಡೆ ಮಾಡಿ ರಸ್ತೆಯಲ್ಲಿ ಹಣ ಎಸೆಯುತ್ತಾ ‘ಮೆರಿ ಕ್ರಿಸ್ಮಸ್’ ಎಂದ!

Update: 2019-12-25 17:19 GMT

ವಾಶಿಂಗ್ಟನ್, ಡಿ. 25: ಬಿಳಿ ಗಡ್ಡದ ವ್ಯಕ್ತಿಯೊಬ್ಬ ಎರಡು ದಿನಗಳ ಹಿಂದೆ ಬ್ಯಾಂಕೊಂದನ್ನು ದರೋಡೆ ಮಾಡಿದನು. ಅವನು ದರೋಡೆ ಮಾಡಿದ ಹಣವನ್ನು ರಸ್ತೆಯೊಂದರಲ್ಲಿ ಗಾಳಿಯಲ್ಲಿ ಎಸೆಯುತ್ತಾ, ರಸ್ತೆಯಲ್ಲಿ ಹೋಗುತ್ತಿದ್ದವರಿಗೆ ‘ಮೆರಿ ಕ್ರಿಸ್ಮಸ್’ ಎನ್ನುತ್ತಾ ಸಾಗಿದನು ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.

ಸೋಮವಾರ ಮಧ್ಯಾಹ್ನ ವ್ಯಕ್ತಿಯೊಬ್ಬ ಕೊಲರಾಡೊ ಸ್ಪ್ರಿಂಗ್ಸ್‌ನಲ್ಲಿರುವ ಅಕಾಡೆಮಿ ಬ್ಯಾಂಕನ್ನು ದೋಚಿ ಹಣದೊಂದಿಗೆ ಪರಾರಿಯಾಗಿರುವುದನ್ನು ಕೊಲರಾಡೊ ಪೊಲೀಸರು ಖಚಿತಪಡಿಸಿದ್ದಾರೆ.

‘‘ಅವನು ಬ್ಯಾಗ್‌ನಿಂದ ಹಣವನ್ನು ಎಸೆಯುತ್ತಾ ‘ಕ್ರಿಸ್ಮಸ್ ಶುಭಾಶಯಗಳು’ ಎಂದು ಹೇಳುತ್ತಿದ್ದನು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಸ್ಥಳೀಯ ಚಾನೆಲ್ ‘ಕೆಕೆಟಿವಿ 11 ನ್ಯೂಸ್’ಗೆ ತಿಳಿಸಿದರು.

ಬಳಿಕ, ಪೊಲೀಸರು 65 ವರ್ಷದ ಡೇವಿಡ್ ವೇನ್ ಒಲಿವರ್ ಎಂಬಾತನನ್ನು ಸಮೀಪದ ಸ್ಟಾರ್‌ಬಕ್ಸ್‌ನಲ್ಲಿ ಬಂಧಿಸಿದ್ದಾರೆ ಎಂದು ಕೊಲರಾಡೊ ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News