ಗಂಡುಮಗುವಿಗೆ ತಾಯಿಯಾದ ಕುಸ್ತಿಪಟು ಗೀತಾ ಫೋಗಟ್

Update: 2019-12-26 06:25 GMT

ಹೊಸದಿಲ್ಲಿ, ಡಿ.25: ಭಾರತದ ಕುಸ್ತಿಪಟುಗಳಾದ ಗೀತಾ ಫೋಗಟ್ ಹಾಗೂ ಪವನ್ ಕುಮಾರ್ ದಂಪತಿಗೆ ಮಂಗಳವಾರ ಗಂಡುಮಗು ಜನಿಸಿದೆ. ಮಗುವಿನ ಜೊತೆಗಿರುವ ಫೋಟೊವನ್ನು ಫೋಗಟ್ ಹಾಗೂ ಕುಮಾರ್ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

 ಮಗುವಿಗೆ ಜನ್ಮ ನೀಡಿದ ಸಹೋದರಿಗೆ ಅಭಿನಂದನೆಗಳು. ನಿನ್ನ ಜೀವನದಲ್ಲಿ ಸಂತೋಷ, ನಗು, ಪ್ರೀತಿ ಸದಾಕಾಲ ನೆಲೆಸಲಿ ಎಂದು ಆಶಿಸುವೆ ಎಂದು ಬಬಿತಾ ಫೋಗಟ್ ಟ್ವೀಟ್ ಮಾಡಿದ್ದಾರೆ. 2010ರಲ್ಲಿ ಹೊಸದಿಲ್ಲಿಯಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ ್ಸನಲ್ಲಿ ಗೀತಾ ಅವರು ಕುಸ್ತಿ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನ ಗೆದ್ದುಕೊಟ್ಟ ಮೊದಲ ಮಹಿಳಾಕುಸ್ತಿಪಟು ಎಂಬ ಕೀರ್ತಿಗೆ ಭಾಜನರಾಗಿದ್ದರು. ಆ ಬಳಿಕ ಕೆನಡಾದಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News