ಆರು ವರ್ಷಗಳ ಬಳಿಕ ಮೊದಲ ರಣಜಿ ಶತಕ ಸಿಡಿಸಿದ ಧವನ್

Update: 2019-12-26 07:05 GMT

ಹೊಸದಿಲ್ಲಿ, ಡಿ.25: ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ 2013ರಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆಗೈದ ಬಳಿಕ ಮೊದಲ ಬಾರಿ ಬಾರಿ ರಣಜಿ ಟ್ರೋಫಿಯಲ್ಲಿ ಶತಕ ಸಿಡಿಸಿದ್ದಾರೆ.

ಇಲ್ಲಿ ಬುಧವಾರ ಆರಂಭವಾದ ಹೈದರಾಬಾದ್ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಧವನ್ ಔಟಾಗದೆ 137 ರನ್ ಗಳಿಸಿ ಫಿಟ್ನೆಸ್ ಸಾಬೀತುಪಡಿಸಲು ಯತ್ನಿಸಿದರು.

ಧವನ್ ಗಾಯದ ಸಮಸ್ಯೆಯಿಂದಾಗಿ ಟೀಮ್ ಇಂಡಿಯಾದಿಂದ ದೂರ ಉಳಿದಿದ್ದು, ಧವನ್‌ರಿಂದ ತೆರವಾರ ಆರಂಭಿಕನ ಸ್ಥಾನವನ್ನು ಕರ್ನಾಟಕದ ಬ್ಯಾಟ್ಸ್‌ಮನ್‌ಗಳಾದ ಕೆ.ಎಲ್.ರಾಹುಲ್ ಹಾಗೂ ಮಾಯಾಂಕ್ ಅಗರ್ವಾಲ್ ತುಂಬುತ್ತಿದ್ದಾರೆ.

ಧವನ್ ಆರು ವರ್ಷಗಳ ಹಿಂದೆ ಭಾರತ ತಂಡಕ್ಕೆ ಕಾಲಿಟ್ಟ ಬಳಿಕ ದೇಶೀಯ ಕ್ರಿಕೆಟ್‌ನಲ್ಲಿ ದಿಲ್ಲಿ ಪರ ಉತ್ತಮವಾಗಿ ಆಡಿಲ್ಲ. ಈ ಮೊದಲು ಧವನ್ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 5 ಇನಿಂಗ್ಸ್ ನಲ್ಲಿ ಕೇವಲ 25 ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.

ದಿಲ್ಲಿ ಮೊದಲ ದಿನದಾಟದಂತ್ಯಕ್ಕೆ 6 ವಿಕೆಟ್‌ಗಳ ನಷ್ಟಕ್ಕೆ 269 ರನ್ ಗಳಿಸಿದ್ದು, ಧವನ್ ಕ್ರೀಸ್ ಕಾಯ್ದುಕೊಂಡಿದ್ದಾರೆ. ಧವನ್ ಕೆಂಪು ಚೆಂಡಿನ ಪಂದ್ಯದಲ್ಲಿ 15 ತಿಂಗಳ ಬಳಿಕ ಮೊದಲ ಶತಕ ಸಿಡಿಸಿದರು. 2018ರಲ್ಲಿ ಕೊನೆಯ ಬಾರಿ ಟೆಸ್ಟ್ ಪಂದ್ಯ ಆಡಿದ್ದರು.

 ಮತ್ತೊಂದು ರಣಜಿಯಲ್ಲಿ 26 ರನ್‌ಗೆ 5 ವಿಕೆಟ್‌ಗಳನ್ನು ಪಡೆದಿರುವ ಆಲ್‌ರೌಂಡರ್ ಜಲಜ್ ಸಕ್ಸೇನ ಗುಜರಾತ್ ತಂಡವನ್ನು ಕೇರಳ ಕೇವಲ 127 ರನ್‌ಗೆ ನಿಯಂತ್ರಿಸಲು ನೆರವಾಗಿದ್ದಾರೆ.

ಟೆಸ್ಟ್ ಸ್ಪೆಷಲಿಸ್ಟ್ ಅಜಿಂಕ್ಯ ರಹಾನೆ ಹಾಗೂ ಯುವ ಆಟಗಾರ ಪೃಥ್ವಿ ಶಾ ಮುಂಬೈ ತಂಡದ ಪರ ಬ್ಯಾಟಿಂಗ್‌ನಲ್ಲಿ ಮಿಂಚಲು ವಿಫಲರಾದರು. ಹೀಗಾಗಿ ಮುಂಬೈ ತಂಡ ರೈಲ್ವೇಸ್ ವಿರುದ್ಧ ಹಳಿ ತಪ್ಪಿದ್ದು, ಪರಿಣಾಮವಾಗಿ ಕೇವಲ 114 ರನ್‌ಗೆ ಆಲೌಟಾಗಿದೆ. ಮುಂಬೈ ತಂಡದಲ್ಲಿ ನಾಯಕ ಸೂರ್ಯಕುಮಾರ ಯಾದವ್(39)ಒಂದಷ್ಟು ಹೋರಾಟ ನೀಡಿದರು. ಟಿ. ಪ್ರದೀಪ್ ಆರು ವಿಕೆಟ್ ಗೊಂಚಲು ಕಬಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News