ಬೋಳಂಗಡಿ: ಅಣ್ಣ ತಮ್ಮನ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ
ಬಂಟ್ವಾಳ, ಡಿ.26: ಹಣದ ವಿಚಾರದಲ್ಲಿ ಅಣ್ಣ ತಮ್ಮಂದಿರ ಮಧ್ಯೆ ನಡೆದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಮೆಲ್ಕಾರ್ ಸಮೀಪದ ಬೋಳಂಗಡಿ ಎಂಬಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.
ಮೆಲ್ಕಾರ್ ಸಮೀಪದ ಪಾಣೆಮಂಗಳೂರು ಗ್ರಾಮದ ಬೋಳಂಗಡಿ ನಿವಾಸಿ ಮುಯ್ಯ ಯಾನೆ ಲಿಯೋ ಲೋಬೊ( 50) ಎಂಬವರು ಕೊಲೆಯಾದವರು.
ಲಿಯೋ ಅವರ ಅಣ್ಣ ಕಿಲ್ಲೆ ಯಾನೆ ಸಿರಿಲ್ ಲೋಬೊ ಕೊಲೆ ಆರೋಪಿ.
ಮನೆಯಲ್ಲಿ ನಿತ್ಯವೂ ಕುಡಿದು ಹಣದ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಇಂದು ಬೆಳಗ್ಗೆ ಸುಮಾರು ಹತ್ತು ಗಂಟೆಯ ವೇಳೆಗೆ ಅಣ್ಣ ತಮ್ಮಂದಿರು ಹಣದ ವಿಚಾರಕ್ಕೆ ಗಲಾಟೆ ಮಾಡಿ ಬಳಿಕ ದೊಣ್ಣೆಯಲ್ಲಿ ಹೊಡೆದಾಡಿಕೊಂಡಿದ್ದಾರೆ.
ದೊಣ್ಣೆ ಯ ಬಲವಾದ ಏಟಿಗೆ ಲಿಯೋ ಲೋಬೊ ಮನೆಯೊಳಗೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ತಮ್ಮ ನಿಗೆ ಸುಮಾರು ಒಂದೂವರೆ ಲಕ್ಷ ರೂ. ಅಣ್ಣ ಸಿರಿಲ್ ಲೋಬೊ ಅವರು ನೀಡಿದ್ದು ಅ ಹಣವನ್ನು ವಾಪಸ್ ನೀಡುವಂತೆ ಬಲವಂತ ಮಾಡುತ್ತಿದ್ದ ಎಂದು ಹೇಳಲಾಗುತ್ತದೆ.
ಮನೆಯಲ್ಲಿ ಇವರಿಬ್ಬರೆ ವಾಸವಾಗಿದ್ದು ಇಬ್ಬರೂ ಅವಿವಾಹಿತರು.
ಸ್ಥಳಕ್ಕೆ ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್ , ನಗರ ಠಾಣಾ ಎಸ್. ಐ.ಅವಿನಾಶ್ ಸಿಬ್ಬಂದಿಯಾದ ಮುರುಗೇಶ್, ಗಿರೀಶ್, ಬಸಪ್ಪ, ಯೋಗೀಶ್, ಪ್ರವೀಣ್, ನಿರಂಜನ್ ಅವರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.