×
Ad

ಉಡುಪಿ ಜಿಲ್ಲೆಯಲ್ಲಿ ಗ್ರಹಣ; ಜನರಿಲ್ಲದೇ ಬಿಕೋ ಎನ್ನುತಿದ್ದ ಬೀದಿ

Update: 2019-12-26 19:36 IST

ಉಡುಪಿ, ಡಿ.26: ಭಾರತದಲ್ಲಿ ಅಪರೂಪಕ್ಕೆಂಬಂತೆ ಜನರಿಗೆ ಕಾಣಲು ಅವಕಾಶವಿದ್ದ ಇಂದಿನ ಕಂಕಣ ಸೂರ್ಯಗ್ರಹಣವನ್ನು ಸುರಕ್ಷಿತವಾಗಿ ವೀಕ್ಷಿಸಿ ಪ್ರಕೃತಿಯ ವೈಚಿತ್ರವನ್ನು ಕಣ್‌ಮನ ತುಂಬಿಸಿಕೊಳ್ಳಲು ಪ್ರೇರೇಪಿಸುವ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಪ್ರಾಧ್ಯಾಪಕರು,ಖಗೋಳ ಆಸಕ್ತರು ನಡೆಸಿದರೆ, ಮತ್ತೊಂದು ಕಡೆ ಇಂದು ಗ್ರಹಣದ ಅವಧಿಯಲ್ಲಿ ಜನರು ಹೊರಗೆ ಬರಲು ನಿರಾಕರಿಸಿ, ಒಂದರ್ಥದಲ್ಲಿ ಕರ್ಪ್ಯೂ ವಾತಾವರಣವನ್ನು ಸೃಷ್ಟಿಸಿ, ಜಪ-ತಪ, ಉಪವಾಸಗಳಲ್ಲೇ ಕಳೆದು ಮೌಢ್ಯ ಮೆರೆದ ಸನ್ನಿವೇಶ ಉಡುಪಿ ಜಿಲ್ಲೆಯ ಅನೇಕ ಕಡೆಗಳಲ್ಲಿ ಕಂಡುಬಂತು.

ಉಡುಪಿ ಸೇರಿದಂತೆ ಹೆಚ್ಚಿನ ಕಡೆಗಳಲ್ಲಿ ಇಂದು ಅಪರಾಹ್ನ 12 ಗಂಟೆಯವರೆಗೆ ಬೀದಿಗಳೆಲ್ಲ ಜನರಿಲ್ಲದೇ ಬಿಕೋ ಎನಿಸುತಿದ್ದವು. ಕೆಲವೇ ಕೆಲವು ಪುಟ್ಟ ಗೂಡಂಗಡಿ ಹಾಗೂ ಸಣ್ಣ ಪುಟ್ಟ ಅಂಗಡಿಗಳನ್ನು ಹೊರತು ಪಡಿಸಿ ಉಳಿದಂತೆ ಯಾವುದೇ ಅಂಗಡಿ ಮುಂಗಟ್ಟುಗಳು ಬಾಗಿಲು ತೆರೆಯದೇ ಊರಿನಲ್ಲಿ ಸಶ್ಮಾನ ವೌನವಿತ್ತು. ಸರಕಾರಿ ಕಚೇರಿಗಳನ್ನು ಹೊರತು ಪಡಿಸಿ ಉಳಿದೆಲ್ಲಾ ಕಚೇರಿಗಳು ತಡವಾಗಿಯೇ ಬಾಗಿಲು ತೆರೆದವು.

ಉಡುಪಿ ಸೇರಿದಂತೆ ಹೆಚ್ಚಿನ ಕಡೆಗಳಲ್ಲಿ ಇಂದು ಅಪರಾಹ್ನ 12 ಗಂಟೆಯವರೆಗೆ ಬೀದಿಗಳೆಲ್ಲ ಜನರಿಲ್ಲದೇ ಬಿಕೋ ಎನಿಸುತಿದ್ದವು. ಕೆಲವೇ ಕೆಲವು ಪುಟ್ಟ ಗೂಡಂಗಡಿ ಹಾಗೂ ಸಣ್ಣ ಪುಟ್ಟ ಅಂಗಡಿಗಳನ್ನು ಹೊರತು ಪಡಿಸಿ ಉಳಿದಂತೆ ಯಾವುದೇ ಅಂಗಡಿ ಮುಂಗಟ್ಟುಗಳು ಬಾಗಿಲು ತೆರೆಯದೇ ಊರಿನಲ್ಲಿ ಸಶ್ಮಾನ ಮೌನವಿತ್ತು. ಸರಕಾರಿ ಕಚೇರಿಗಳನ್ನು ಹೊರತು ಪಡಿಸಿ ಉಳಿದೆಲ್ಲಾ ಕಚೇರಿಗಳು ತಡವಾಗಿಯೇ ಬಾಗಿಲು ತೆರೆದವು. ಆದರೆ ಅಪರಾಹ್ನ ಒಂದು ಗಂಟೆಯ ವೇಳೆ ದಿನದ ವಾತಾವರಣ ಮರುಕಳಿಸಿತು. ಜನರು ತಮ್ಮೆಲ್ಲಾ ಕೆಲಸಕಾರ್ಯದ ಮೇಲೆ ಓಡಾಡ ತೊಡಗಿದರು. 2 ಗಂಟೆಯ ಬಳಿಕ ಅಂಗಡಿಮುಂಗಟ್ಟು, ಕಚೇರಿಗಳೆಲ್ಲ ಸಂಪೂರ್ಣವಾಗಿ ತೆರೆದು ಎಂದಿನ ವಾತಾವರಣ ಮರಳಿತು.

ಮಠದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ:  ಕಂಕಣ ಸೂರ್ಯಗ್ರಹಣದ ಪ್ರಯುಕ್ತ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮುಂಜಾನೆಯಿಂದಲೇ ಸಾವಿರಾರು ಭಕ್ತರು ಕೃಷ್ಣ ದೇವರ ದರ್ಶನ ಮಾಡಿದರು. ದೇವಾಲಯದ ಬಾಗಿಲು ಮುಚ್ಚದೇ ಇದ್ದುದರಿಂದ ಭಕ್ತರಿಗೆ ಅನುಕೂಲವಾಯಿತು.

ಗ್ರಹಣ ಕಾಲದಲ್ಲಿ ಮಠಾಧೀಶರು ಪುಣ್ಯಸ್ನಾನ ಕೈಗೊಂಡರು. ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥರು ಹಾಗೂ ಉತ್ತರಾಧಿ ಮಠಾಧೀಶರ ನೇತೃತ್ವದಲ್ಲಿ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥರು, ಪೇಜಾವರ ಮಠದ ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನ ತೀರ್ಥರು, ಸೋದೆ ಮಠದ ಶ್ರೀವಿಶ್ವವಲ್ಲಭತೀರ್ಥರು ಹಾಗೂ ಪಲಿಮಾರು ಮಠದ ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರ ತೀರ್ಥರು ಅಲ್ಲದೇ ಸಾವಿರಾರು ಭಕ್ತಾದಿಗಳು ಮಧ್ವ ಸರೋವರದಲ್ಲಿ ಸ್ನಾನ, ಜಪಾನುಷ್ಠಾನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.

ಇಂದು ಮುಂಜಾನೆಯ ನೈರ್ಮಲ್ಯ ವಿಸರ್ಜನಾ ಪೂಜೆಯ ಬಳಿಕ ಕೃಷ್ಣ ದೇವರಿಗೆ ಯಾವುದೇ ಅಲಂಕಾರ ಮಾಡಿರಲಿಲ್ಲ. ಗ್ರಹಣ ಮೋಕ್ಷದ ಬಳಿಕ ಮಹಾಪೂಜೆ ನೆರವೇರಿಸಿ, ಭಕ್ತರಿಗೆ ಅನ್ನಪ್ರಸಾದ ಬಡಿಸಲಾಯಿತು. ಗ್ರಹಣ ಕಾಲದಲ್ಲಿ ಮಠದೊಳಗೆ ಪೂಜೆ, ಹೋಮಾದಿಗಳು ನಡೆದವು ಎಂದು ಅವರು ತಿಳಿಸಿದರು.

ಊರಿನಲ್ಲೆಲ್ಲಾ ಜಪ-ತಪ: ಸೂರ್ಯಗ್ರಹಣದ ನಿಮಿತ್ತ ಇಂದು ಉಡುಪಿ ಜಿಲ್ಲೆಯ ಅನೇಕ ಕಡೆಗಳಲ್ಲಿ ಜಪ-ತಪ-ಪಾರಾಯಣಗಳು ನೆರವೇರಿದವು. ಕಾಪು ತಾಲೂಕಿನ ಕುತ್ಯಾರಿನಲ್ಲಿ ನಡೆದಿರುವ ಮಹಾಯಾಗದಲ್ಲಿ ಇಂದು ಗ್ರಹಣ ಸಂಬಂಧ ಯಾಗ ನಡೆಯಿತು. ಗ್ರಹಣದ ಪ್ರಾರಂಭದಿಂದ ಮೋಕ್ಷದ ವರೆಗೂ ಈ ಗ್ರಹಣ ಸಂಬಂಧಿ ಹೋಮ ನಡೆಯಿತು.

ಊರಿನ ಹಾಗೂ ಅಕ್ಕಪಕ್ಕದ ಊರಿನ ನೂರಾರು ಮಂದಿ ಇದರಲ್ಲಿ ಪಾಲ್ಗೊಂಡಿದ್ದರು. ಐದು ದಿನಗಳ ಕಾಲ ನಡೆಯುವ ಈ ಯಾಗಕ್ಕೆ ಬುದವಾರ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸ್ವತಹ ಚಾಲನೆ ನೀಡಿ ಗ್ರಹಣ ದೋಷ ನಿವಾರಣೆಗೆ ಪ್ರಾರ್ಥಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News