ರೆಡ್‌ಕ್ರಾಸ್ ವತಿಯಿಂದ ಜೀವರಕ್ಷಕ ಔಷಧಿ ವಿತರಣೆ
ಉಡುಪಿ, ಡಿ.26: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾ ಘಟಕದ ವತಿಯಿಂದ ಗುರುವಾರ ರೆಡ್‌ಕ್ರಾಸ್ ಭವನದ ಹೆನ್ರಿ ಡ್ಯುನಾಂಟ್ ಹಾಲ್‌ನಲ್ಲಿ ಫ್ಯಾಮಿಲಿ ಪ್ಲಾನಿಂಗ್ ಇಂಡಿಯಾ ಸಂಸ್ಥೆಗೆ ಜೀವರಕ್ಷಕ ಔಷಧಿ ವಿತರಣೆಯನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಮಾತನಾಡಿ, ರೆಡ್‌ಕ್ರಾಸ್ ಸಂಸ್ಥೆಯು ಫ್ಯಾಮಿಲಿ ಪ್ಲಾನಿಂಗ್ ಇಂಡಿಯಾ ಸಂಸ್ಥೆಗೆ ನೀಡುತ್ತಿರುವ ಔಷಧಿ ವಿತರಣೆ ಒಂದು ಒಳ್ಳೆಯ ಯೋಜನೆಯಾಗಿದ್ದು, ಸಂಸ್ಥೆ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ವಿವರವಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯಅತಿಥಿಯಾಗಿ ಆಗಮಿಸಿದಫ್ಯಾಮಿಲಿ ಪ್ಲಾನಿಂಗ್ ಇಂಡಿಯಾ ಸಂಸ್ಥೆಯ ಅಧ್ಯಕ್ಷೆ ಹರಿಣಿ ದಾಮೋದರ್ ಅವರಿಗೆ ಬಸ್ರೂರು ರಾಜೀವ್ ಶೆಟ್ಟಿ, 28 ಬಗೆಯ ಜೀವರಕ್ಷಕಔಷಧಿಗಳಲ್ಲಿ ವಿಟಮಿನ್ ಮಾತ್ರೆಗಳು, ಪ್ಯಾರಸಿಟಮಲ್, ಸಿಟ್ರಿಜನ್‌ಗಳನ್ನು ಹಸ್ತಾಂತರಿಸಿದರು.
ಗೌರವ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಕೆ., ಮಾಜಿ ರೆಡ್‌ಕ್ರಾಸ್ ಸಬಾಪತಿ ಡಾ.ಉಮೇಶ್ ಪ್ರಭು, ಕಾರ್ಯಕಾರಿ ಮಂಡಳಿ ಸದಸ್ಯರು,ಸಂಸ್ಥೆಯ ಖಜಾಂಚಿ ರಮಾದೇವಿ ಮತ್ತಿತರರು ಉಪಸ್ಥಿತರಿದ್ದರು.
ಉಪಪಬಾಪತಿ ಡಾ. ಅಶೋಕ್ ಕುಮಾರ್ ವೈ.ಜಿ. ಸ್ವಾಗತಿಸಿದರು. ಆಡಳಿತ ಮಂಡಳಿ ಸದಸ್ಯೆ ಇಂದಿರಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಗೌರವ ಖಚಾಂಚಿ ಟಿ.ಚಂದ್ರಶೇಖರ್ ವಂದಿಸಿದರು.