ಡಿ. 27, 28ರಂದು ಸಚಿವ ಈಶ್ವರಪ್ಪ ಉಡುಪಿಗೆ
Update: 2019-12-26 20:28 IST
ಉಡುಪಿ, ಡಿ.26: ರಾಜ್ಯದ ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಎಸ್. ಈಶ್ವರಪ್ಪಡಿ. 27 ಮತ್ತು 28ರಂದು ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಡಿ.27 ರಂದು ಬೆಳಗ್ಗೆ 10ಕ್ಕೆ ಕಾರ್ಕಳಕ್ಕೆ ಆಗಮಿಸಿ ನಿಟ್ಟೆ ಗ್ರಾಮದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಅಪರಾಹ್ನ 12ಕ್ಕೆ ಕುತ್ಯಾರು ಧಾರ್ಮಿಕ ಕಾರ್ಯಕ್ರಮ, 3:30ಕ್ಕೆ ಕುಕ್ಕಂದೂರು ಗ್ರಾಪಂನ ನೂತನ ಕಟ್ಟಡದ ಉದ್ಘಾಟನೆ, ಸಂಜೆ 6ಕ್ಕೆ ಕಾಪುವಿನಲ್ಲಿ ಶತ-ವಜ್ರ-ಸ್ವರ್ಣ ಸಂಭ್ರಮ ಸಮಾರೋಪ, ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿ ಮಣಿಪಾಲದಲ್ಲಿ ವಾಸ್ತವ್ಯ.
ಡಿ.28ರಂದು ಬೆಳಗ್ಗೆ 8:30ಕ್ಕೆ ಕೋಟ ವಿವೇಕಾ ಪದವಿಪೂರ್ವ ಕಾಲೇಜಿನಲ್ಲಿ ಹೊಳಪು ಕಾರ್ಯಕ್ರಮ, 11ಕ್ಕೆ ಕಾಳಾವರದಲ್ಲಿ ಧಾರ್ಮಿಕ ಕಾರ್ಯಕ್ರಮ, ಅಪರಾಹ್ನ 12:30ಕ್ಕೆ ಕೋಟದಲ್ಲಿ 30 ಜಿಲ್ಲೆಗಳ ಜಿಪಂ ಅಧ್ಯಕ್ಷರ ಸಭೆ, 1:30ಕ್ಕೆ ಉಡುಪಿ ಜಿಪಂ ಪ್ರಗತಿ ಪರಿಶೀಲೆ ನಡೆಸಿ ಮಂಗಳೂರಿಗೆ ನಿರ್ಗಮನ.