ಮೂಡುಬಿದಿರೆ: ಯುವಕನ ಮೃತದೇಹ ಬಾವಿಯಲ್ಲಿ ಪತ್ತೆ
Update: 2019-12-26 20:47 IST
ಮೂಡುಬಿದಿರೆ : ಹಳೆಯಂಗಡಿ ತೋಕೂರಿನ ಯುವಕನೋರ್ವನ ಮೃತದೇಹವು ಮೂಡುಬಿದಿರೆ ಸಮೀಪದ ಪುತ್ತಿಗೆಯ ಎನಿಕ್ರಿಪಲ್ಲದ ಬಾವಿಯೊಂದರಲ್ಲಿ ಗುರುವಾರ ಪತ್ತೆಯಾಗಿದೆ.
ತೋಕೂರು ನಿವಾಸಿ ರೋಹಿತ್ (25) ಮೃತರು. ರೋಹಿತ್ ವಾದ್ಯ ಕಲಾವಿದರಾಗಿದ್ದು, ಬುಧವಾರ ಒಂಟಿಕಟ್ಟೆಯಲ್ಲಿ ನಡೆದ ಕೋಟಿ-ಚೆನ್ನಯ ಜೋಡುಕರೆ ಕಂಬಳದಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ. ಆದರೆ ರೋಹಿತ್ ಅವರ ಮೃತ ದೇಹ ಒಂಟಿಕಟ್ಟೆಯಿಂದ ಮುಕ್ಕಾಲು ಕಿ.ಮೀ ದೂರದ ಎನಿಕ್ರಿಪಲ್ಲದ ಆವರಣದ ಬಾವಿಯೊಂದರಲ್ಲಿ ಪತ್ತೆಯಾಗಿದ್ದು, ಮೃತದೇಹದಲ್ಲಿ ಗಾಯದ ಗುರುತುಗಳಿವೆ ಎನ್ನಲಾಗಿದೆ.
ಮೃತರ ಸಹೋದರ ನಿಶ್ಚಿತ್ ಅವರು ಇಲ್ಲಿನ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.