×
Ad

ಬಂಟ್ವಾಳ : ಶ್ರೀ ನಾರಾಯಣ ಗುರು ಮಂದಿರದ ಕಾಣಿಕೆ ಡಬ್ಬಿಯಿಂದ ಕಳವು

Update: 2019-12-26 22:35 IST

ಬಂಟ್ವಾಳ, ಡಿ. 26: ತಾಲೂಕಿನ ರಾಯಿ ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರದ ಕಾಣಿಕೆ ಡಬ್ಬಿಯನ್ನು ಕಳವುಗೈದ ಘಟನೆ ಗುರುವಾರ ತಡರಾತ್ರಿ ನಡೆದಿದೆ.

ಅವರು ಮಂದಿರದ ಮುಂಬಾಗಿಲಿನ ಬೀಗ ಮುರಿದು ಒಳಗಿದ್ದ ಎರಡು ಕಾಣಿಕೆ ಡಬ್ಬಿಗಳನ್ನು ಒಡೆದು ಹಣ ತೆಗೆದು ಪರಾರಿಯಾಗಿ ದ್ದಾರೆ. ಮಂದಿರದ ಅರ್ಚಕರು ಬೆಳಗ್ಗೆ ಪೂಜೆಗೆಂದು ಬಂದಾಗ ಕಳವು ಕೃತ್ಯ ಬೆಳಕಿಗೆ ಬಂದಿದೆ.

ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ಶೇಖರ ಅಂಚನ್ ಅವರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ. ಸಂಗಬೆಟ್ಟು ಮತ್ತು ರಾಯಿಯಲ್ಲಿ ಒಂದೇ ತಂಡ ಕಳ್ಳತನ ನಡೆಸಿರಬೇಕೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News