ನೇಪಾಳದಲ್ಲಿ 122 ಚೀನೀಯರ ಬಂಧನ

Update: 2019-12-26 18:13 GMT

ಕಠ್ಮಂಡು (ನೇಪಾಳ), ಡಿ. 26: ಸೈಬರ್ ಹಗರಣವೊಂದಕ್ಕೆ ಸಂಬಂಧಿಸಿ ಟೂರಿಸ್ಟ್ ವೀಸಾದಲ್ಲಿ ನೇಪಾಳದಲ್ಲಿರುವ 100ಕ್ಕೂ ಅಧಿಕ ಚೀನೀಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಇದು ಇದುವರೆಗೆ ವಿದೇಶೀಯರ ವಿರುದ್ಧ ನೇಪಾಳ ನಡೆಸುತ್ತಿರುವ ಅತಿ ದೊಡ್ಡ ಕಾರ್ಯಾಚರಣೆಯಾಗಿದೆ.

ರಾಜಧಾನಿ ಕಠ್ಮಂಡುವಿನಲ್ಲಿರುವ ಒಂಬತ್ತು ಮನೆಗಳ ಮೇಲೆ ಸೋಮವಾರ ಪೊಲೀಸರು ನಡೆಸಿದ ದಾಳಿಯಲ್ಲಿ 8 ಮಹಿಳೆಯರು ಸೇರಿದಂತೆ 122 ಚೀನೀಯರನ್ನು ಬಂಧಿಸಲಾಗಿದೆ.

 ‘‘ಅವರು ಸೈಬರ್ ಅಪರಾಧದಲ್ಲಿ ತೊಡಗಿದ್ದಾರೆ ಎಂದು ನಾವು ಶಂಕಿಸಿದ್ದೇವೆ. ತನಿಖೆ ನಡೆಯುತ್ತಿದೆ. ಬಳಿಕ ಕಾನೂನಿಗೆ ಅನುಗುಣವಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ’’ ಎಂದು ನೇಪಾಳದ ಸೆಂಟ್ರಲ್ ಇನ್ವೆಸ್ಟಿಗೇಶನ್ ಬ್ಯೂರೋದ ಮುಖ್ಯಸ್ಥ ನೀರಜ್ ಬಹಾದುರ್ ಶಾಹಿ ತಿಳಿಸಿದರು.

700ಕ್ಕೂ ಅಧಿಕ ಮೊಬೈಲ್ ಫೋನ್‌ಗಳು, 331 ಲ್ಯಾಪ್‌ಟಾಪ್‌ಗಳು ಮತ್ತು ಸುಮಾರು 100 ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳನ್ನು ಅವರ ಮನೆಗಳಿಂದ ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಅವರಿಂದ ಪೆನ್ ಡ್ರೈವ್‌ಗಳು ಮತ್ತು ಸಿಮ್ ಕಾರ್ಡ್‌ಗಳನ್ನೂ ವಶಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News