×
Ad

ಇಬ್ಬರು ಟಿಡಿಪಿ ಮುಖಂಡರಿಗೆ ಗೃಹ ಬಂಧನ

Update: 2019-12-27 13:04 IST
ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ

ಹೊಸದಿಲ್ಲಿ, ಡಿ.27: ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ‘ಮೂರು ರಾಜಧಾನಿ’ ಸೂತ್ರಕ್ಕೆ ಮಾನ್ಯತೆ ನೀಡುವ ಮಹತ್ವದ ಸಭೆಗೆ ಮೊದಲು ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಲು ತೆರಳುತ್ತಿದ್ದ ತೆಲುಗು ದೇಶಂ ಪಕ್ಷದ(ಟಿಡಿಪಿ)ಇಬ್ಬರು ನಾಯಕರನ್ನು ಆಂಧ್ರಪ್ರದೇಶದ ವಿಜಯವಾಡದಲ್ಲಿ ಗೃಹ ಬಂಧನದಲ್ಲಿರಿಸಲಾಗಿದೆ.

ಗುರುವಾರ ಬೆಳಗ್ಗೆ ವಿಜಯವಾಡ ಪೊಲೀಸರು ಟಿಡಿಪಿ ಸಂಸದ ಕೆ.ಶ್ರೀನಿವಾಸ್ ಹಾಗೂ ಶಾಸಕ ಬುದ್ಧ ವೆಂಕಣ್ಣರನ್ನು ಬಂಧಿಸಿದ್ದಾರೆ.

ತನ್ನ ಪಕ್ಷದ ಇಬ್ಬರು ನಾಯಕರನ್ನು ಗೃಹಬಂಧನದಲ್ಲಿರಿಸಿರುವ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿದ ಟಿಡಿಪಿ ಪಕ್ಷದ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು, ‘‘ಸರಕಾರವು ತನ್ನ ಏಕಪಕ್ಷೀಯ, ಸರ್ವಾಧಿಕಾರಿ ಹಾಗೂ ನಿಗ್ರಹ ಮನೋಭಾವಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ’’ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News