ಪಂಜರಕೋಡಿ: ಪೊಲೀಸ್ ದೌರ್ಜನ್ಯದ ವಿರುದ್ಧ ಭಿತ್ತಿಪತ್ರ ಪ್ರದರ್ಶನ
Update: 2019-12-27 14:37 IST
ಬಂಟ್ವಾಳ, ಡಿ. 27: ಸುನ್ನೀ ಕೋ ಆರ್ಡಿನೇಶನ್ ಕಮಿಟಿ ಆಫ್ ಕರ್ನಾಟಕ ವತಿಯಿಂದ ಮಂಗಳೂರು ಪೊಲೀಸ್ ದೌರ್ಜನ್ಯದ ವಿರುದ್ಧ ಭಿತ್ತಿಪತ್ರ ಪ್ರದರ್ಶನ ಶುಕ್ರವಾರ ಪಂಜರಕೋಡಿ ರಿಫಾಇಯ್ಯ ಜುಮಾ ಮಸೀದಿ ಆವರಣದಲ್ಲಿ ನಡೆಯಿತು.
ಪಂಜರಕೋಡಿ ಖತೀಬ್ ಅಬೂಬಕರ್ ಮದನಿ ಪ್ರಸ್ತುತ ನಡೆಯುತ್ತಿರುವ ಸನ್ನಿವೇಶಗಳ ಬಗ್ಗೆ ಮಾಹಿತಿ ನೀಡಿದರು.
ಕೋಮು ಸೌಹಾರ್ದತೆ ಧಕ್ಕೆ ತರುವಂತಹ ಮಾಧ್ಯಮಗಳು ಹಾಗೂ ಮಂಗಳೂರಿನಲ್ಲಿ ಎರಡು ಅಮಾಯಕರ ಹತ್ಯೆಗೆ ಕಾರಣರಾದ ಪೊಲೀಸರ ವಿರುದ್ಧ ಭಿತ್ತಿಪತ್ರ'ಗಳನ್ನು ಪ್ರದರ್ಶಿಸಿ ವಿಶೇಷ ರೀತಿಯಲ್ಲಿ ಪ್ರತಿಭಟಿಸಲಾಯಿತು.