ಕೃಷ್ಣಾಪುರ : ಎನ್ಆರ್ ಸಿ, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ

Update: 2019-12-27 12:21 GMT

ಕೃಷ್ಣಾಪುರ : ಎನ್ಆರ್ ಸಿ ಮತ್ತು ಸಿಎಎ ತಿದ್ದುಪಡಿ ಕಾಯ್ದೆ ವಿರೋಧಿಸಿ  ಬದ್ರಿಯಾ ಜುಮಾ ಮಸೀದಿ ಕೃಷ್ಣಾಪುರ ಇದರ ಅಧೀನ ಮಸೀದಿಗಳಾದ ಬದ್ರುಲ್ ಹುದಾ ಜುಮಾ ಮಸೀದಿ, ಈದ್ಗಾ ಜುಮಾ ಮಸೀದಿ ಹಾಗು ಇತರ ಮಸೀದಿಗಳಲ್ಲಿ ಶಾಂತಿಯುತ ಪ್ರತಿಭಟನೆ ನಡೆಯಿತು.

ಡಿ.19ರಂದು ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರು ಗೋಲಿಬಾರ್ ನಡೆಸಿದ ಪರಿಣಾಮ ಇಬ್ಬರು ಬಲಿಯಾಗಿದ್ದು, ಘಟನೆಯನ್ನು ವ್ಯಾಪಕವಾಗಿ ಖಂಡಿಸಲಾಯಿತು. ತಪ್ಪಿತಸ್ಥ ಪೊಲೀಸರನ್ನು ಕೂಡಲೇ ವಜಾಗೊಳಿಸಬೇಕೆಂದು ಹಾಗೂ ಹೈಕೋರ್ಟ್ ನ್ಯಾಯಮೂರ್ತಿಯವರ ಮೂಲಕ ತನಿಖೆ ನಡೆಸಬೇಕೆಂದು ರಾಜ್ಯ ಸರ್ಕಾರವನ್ನು ಈ ಸಂದರ್ಭ ಕೋರಲಾಯಿತು.

ಈ ಸಂದರ್ಭ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಹಾಜಿ ಬಿ.ಎಂ.ಮುಮ್ತಾಝ್ ಅಲಿ, ಜಮಾಅತ್ ಖತೀಬ್ ಮೌಲಾನಾ ಪಿ.ಎಂ.ಉಮರುಲ್ ಫಾರೂಕ್ ಮತ್ತು ಬದ್ರುಲ್ ಹುದಾ ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್ ರಫೀಕ್, ಈದ್ಗಾ ಜುಮಾ ಮಸೀದಿಯ ಅಧ್ಯಕ್ಷ ಕೆ.ಎಚ್.ಅಹ್ಮದ್ ಬಾವ, ತ್ವೈಬಾ ಮಸೀದಿ ಅಧ್ಯಕ್ಷ ಹಾಜಿ ಕೆ.ಎಮ್.ಶರೀಫ್ , ಬದ್ರಿಯಾ ಮಸೀದಿ ಅಧ್ಯಕ್ಷ ಹಾಜಿ ಬಿ.ಪಿ.ಮುಹಮ್ಮದ್ ಶರೀಫ್ ಹಾಗೂ ಮಸ್ಜಿದುಲ್ ಹುದಾ ಅಧ್ಯಕ್ಷ ಹಾಜಿ ಕೆ.ಎಚ್.ಅಬ್ದುಲ್ ರಹ್ಮಾನ್ ಮತ್ತು ಮಸೀದಿಗಳ ಪದಾಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News