×
Ad

ಪಂಜರಕೋಡಿ: ಪೊಲೀಸ್ ದೌರ್ಜನ್ಯ ಖಂಡಿಸಿ ಭಿತ್ತಿಪತ್ರ ಪ್ರದರ್ಶನ

Update: 2019-12-27 17:34 IST

ಸಾಲೆತ್ತೂರು,ಡಿ. 27: ಮಂಗಳೂರು ಗೋಲಿಬಾರ್ ಹಾಗೂ ಪೋಲೀಸ್ ದೌರ್ಜನ್ಯದ ವಿರುದ್ಧ ಭಿತ್ತಿಪತ್ರ ಪ್ರದರ್ಶನವು ರಿಫಾಇಯ್ಯ ಜುಮಾ ಮಸೀದಿ ಪಂಜರಕೋಡಿ ವತಿಯಿಂದ ಜುಮಾ ನಮಾಝಿನ ಬಳಿಕ ನಡೆಯಿತು.

ಸಭೆಯಲ್ಲಿ ಪಂಜರಕೋಡಿ ಖತೀಬ್ ಅಬೂಬಕ್ಕರ್ ಮದನಿ ಪ್ರಸಕ್ತ ನಡೆಯುತ್ತಿರುವ ಸನ್ನಿವೇಶಗಳ ಬಗ್ಗೆ ಮಾತನಾಡಿದರು.

ಇದೇ ವೇಳೆ ಕೋಮು ಸೌಹಾರ್ದಕ್ಕೆ ಧಕ್ಕೆ ತರುತ್ತಿವೆ ಎಂದು ಆರೋಪಿಸಿ ಮಾಧ್ಯಮಗಳು ‌ಹಾಗೂ ಮಂಗಳೂರಿನಲ್ಲಿ ಎರಡು ಅಮಾಯಕರ ಹತ್ಯೆಗೆ ಕಾರಣರಾದ ಪೊಲೀಸರ ವಿರುದ್ಧ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News