×
Ad

ಶಿರ್ವ ಸಂತೆಗೆ ದಾಳಿ: 60ಕೆ.ಜಿ. ನಿಷೇಧಿತ ಪ್ಲಾಸ್ಟಿಕ್ ವಶ

Update: 2019-12-27 20:05 IST

ಶಿರ್ವ, ಡಿ.27: ಶಿರ್ವ ಗ್ರಾಮದಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಷೇಧಿಸುವ ನಿಟ್ಟಿನಲ್ಲಿ ಶಿರ್ವ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಂತಪದ್ಮನಾ ನಾಯಕ್ ನೇತೃತ್ವದ ತಂಡ ಗುರುವಾರ ವಾರದ ಸಂತೆಗೆ ದಾಳಿ ನಡೆಸಿ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದ್ದರಲ್ಲದೆ ಸುಮಾರು 60 ಕೆ.ಜಿ. ಯಷ್ಟು ನಿಷೇಧಿತ ಪ್ಲಾಸ್ಟಿಕ್ ಚೀಲಗಳನ್ನು ವಶಪಡಿಸಿಕೊಂಡರು.

ಪೇಟೆಯ ವಿವಿಧ ಅಂಗಡಿಗಳಿಗೆ, ಜವುಳಿ ಮಳಿಗೆ, ಬಾರ್, ರೆಸ್ಟೋರೆಂಟ್, ಸಣ್ಣಪುಟ್ಟ ಎಲ್ಲಾ ಪ್ಯಾಪಾರಿಗಳಿಗೆ ಮನವರಿಕೆಯ ಜೊತೆಗೆ ಎಚ್ಚರಿಕೆಯನ್ನು ನೀಡಿದರು. ವ್ಯಾಪಾರಸ್ಥರು, ಹೊಟೇಲ್ ಅಂಗಡಿ ಮಾಲಿಕರಿಗೆ 2020ನೇ ಜನವರಿ ಒಂದನೇ ತಾರೀಕಿ ನಿಂದ ಕೇವಲ ಒಣಕಸವನ್ನು ಮಾತ್ರ ಗ್ರಾಪಂ ವತಿಯಿಂದ ಸ್ವೀಕರಿಸಲಾಗುವುದು. ಹಸಿ ಕಸವನ್ನು ವ್ಯಾಪಾರಿಗಳು, ಸಾರ್ವ ಜನಿಕರು ತಮ್ಮ ಹಂತದಲ್ಲಿಯೇ ವಿಲೇವಾರಿಗೆ ಕಡ್ಡಾಯವಾಗಿ ವ್ಯವಸ್ಥೆ ಮಾಡಿ ಕೊಳ್ಳುವಂತೆ ಅವರು ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News