×
Ad

ಹೊಳಪು ಕ್ರೀಡಾಕೂಟ ಪಕ್ಷಾತೀತ: ಕೋಟತಟ್ಟು ಗ್ರಾಪಂ ಸ್ಪಷ್ಟನೆ

Update: 2019-12-27 20:13 IST

ಉಡುಪಿ, ಡಿ.27: ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಕೋಟ ತಟ್ಟು ಗ್ರಾಪಂ ಮತ್ತು ಡಾ.ಕಾರಂತ ಪ್ರತಿಷ್ಠಾನ ಸಹಯೋಗದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಪಕ್ಷಾತೀತವಾಗಿ ನಡೆಯುತ್ತಿರುವ ಹೊಳಪು ಜನಪ್ರತಿನಿಧಿಗಳ ಕ್ರೀಡಾಕೂಟಕ್ಕೆ ಯಾವುದೇ ರಾಜಕಾರಣ ಹಾಗೂ ಪಕ್ಷಗಳ ಲೇಪವಿರುವುದಿಲ್ಲ ಎಂದು ಕೋಟತಟ್ಟು ಗ್ರಾಪಂ ಅಧ್ಯಕ್ಷ ರಘು ತಿಂಗಳಾಯ ಸ್ಪಷ್ಟಪಡಿಸಿದ್ದಾರೆ.

ಡಿ.28ರಂದು ನಡೆಯುವ ಈ ಕ್ರೀಡಾಕೂಟದಲ್ಲಿ ಅವಳಿ ಜಿಲ್ಲೆಗಳ ಎಲ್ಲಾ ಶಾಸಕರು, ಸಂಸದರು, ಜಿಪಂ, ತಾಪಂ, ಗ್ರಾಪಂ ಮತ್ತು ನಗರ ಸ್ಥಳೀಯ ಆಡಳಿತ ಸಂಸ್ಥೆಗಳ ಸದಸ್ಯರು ಪಕ್ಷಾತೀತವಾಗಿ ಎಲ್ಲರೂ ರಾಜಕೀಯೇತರ ನೆಲೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಈ ನಡುವೆ ಅನಾಮಧೇಯ ಸಂದೇಶ ಹೊರಡುತ್ತಿದ್ದು, ಒಂದು ರಾಜಕೀಯ ಪಕ್ಷದವರು ಕಾರ್ಯಕ್ರಮವನ್ನು ಬಹಿಷ್ಕರಿಸುತ್ತಿದ್ದಾರೆ ಎಂಬ ಅಪಪ್ರಚಾರ ಸಂಘಟಕರಾದ ನಮಗೆ ನೋವುಂಟು ಮಾಡಿದೆ. ಇಂತಹ ಜವಾಬ್ದಾರಿ ಇಲ್ಲದ ಹೇಳಿಕೆ ಕೊಡುವವರ ಬಗ್ಗೆ ಈಗಾಗಲೇ ಪೊಲೀಸ್ ಇಲಾಖೆಗೆ ದೂರು ನೀಡ ಲಾಗಿದೆ. ಈ ಸುಳ್ಳು ಅಪಪ್ರಚಾರಕ್ಕೆ ಕಿವಿಗೊಡದೆ ಪಕ್ಷಾತೀತವಾಗಿ ಈ ಕಾರ್ಯ ಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಅವಳಿ ಜಿಲ್ಲೆಯ ಎಲ್ಲಾ ಪಕ್ಷದ ಜನಪ್ರತಿನಿಧಿಗಳಲ್ಲಿ ವಿನಂತಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News