×
Ad

ಡಿ.28ರಂದು ಧ್ವನಿ ಪರೀಕ್ಷೆ : ಎಸ್.ಪಿ.ಬಾಲಸುಬ್ರಹ್ಮಣ್ಯಂ ಜತೆ ಹಾಡಲು ಅವಕಾಶ

Update: 2019-12-27 22:22 IST

ಮಂಗಳೂರು, ಡಿ.27: ಕರ್ನಾಟಕ ನೆರೆ ಸಂತ್ರಸ್ತರ ಸಹಾಯಾರ್ಥವಾಗಿ ನಗರದ ನೆಹರೂ ಮೈದಾನದಲ್ಲಿ ಜ.19ರಂದು ಆಯೋಜಿಸಲಾದ ನಾಡಿನ ಖ್ಯಾತ ಗಾಯಕ ಡಾ. ಎಸ್. ಪಿ. ಬಾಲಸುಬ್ರಹ್ಮಣ್ಯಂ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಎಸ್‌ಪಿಬಿ ಅವರೊಂದಿಗೆ ಹಾಡುವ ಅವಕಾಶವನ್ನು ಸ್ಥಳೀಯರಿಗೆ ಕಲ್ಪಿಸಲಾಗಿದೆ.

ಎಸ್.ಕೆ. ಮುನಿಸಿಪಲ್ ಎಂಪ್ಲಾಯಿಸ್ ಯೂನಿಯನ್‌ನ ಸಹಕಾರದಿಂದ ನಡೆಯುವ ಈ ಕಾರ್ಯಕ್ರಮದಲ್ಲಿ ಸ್ಥಳೀಯ ಗಾಯಕ, ಗಾಯಕಿಯರು ಭಾಗವಹಿಸಬಹುದು. ಆಸಕ್ತ ಗಾಯಕರು ಡಿ.28ರಂದು ಬೆಳಗ್ಗೆ 9:30ರಿಂದ ನಗರದ ಪುರಭವನದಲ್ಲಿ ಧ್ವನಿ ಪರೀಕ್ಷೆ ಗಾಗಿ ಸ್ಥಳದಲ್ಲೆ ಹೆಸರು ನೋಂದಾಯಿಸಬಹುದು ಎಂದು ಪ್ರಕಟನೆ ತಿಳಿಸಿದೆ.ಒಕ್ಕೂಟದ ಕಾರ್ಯದರ್ಶಿ ಫಾರೂಕ್ ಕಿನ್ಯ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News