×
Ad

ಪಡುಬಿದ್ರಿ ಸಿಎ ಬ್ಯಾಂಕ್‍ಗೆ ರಾಜ್ಯ ಸಹಕಾರ ಮಹಾಮಂಡಲ ಅಧ್ಯಕ್ಷ ಭೇಟಿ

Update: 2019-12-27 22:25 IST

ಪಡುಬಿದ್ರಿ: ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಪ್ರಧಾನ ಕಚೇರಿ ಸಹಕಾರ ಸಂಗಮಕ್ಕೆ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಲದ ಅಧ್ಯಕ್ಷ ಎನ್.ಗಂಗಣ್ಣ ಭೇಟಿ ನೀಡಿದರು.

ನೂತನ ಕಟ್ಟಡ ಸಂಕೀರ್ಣವನ್ನು ವೀಕ್ಷಿಸಿದ ಅವರು ಸಹಕಾರ ಸಂಘಗಳು ಆದಾಯ ತೆರಿಗೆ ಇಲಾಖೆಯಿಂದ ಎದುರಿಸುತ್ತಿರುವ ಸಮಸ್ಯೆಗಳಿಗೆ ಹೇಗೆ ಸಹಕಾರಿಗಳು ಒಗ್ಗೂಡಿ ಪರಿಹಾರ ಪಡೆಯಬಹುದೆಂದು ಚರ್ಚಿಸಿದರು. ಇದೇ ವೇಳೆ ಸಹಕಾರ ರಂಗದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ಪಡುಬಿದ್ರಿ ಸೊಸೈಟಿಗೆ ಪ್ರಥಮ ಭೇಟಿ ನೀಡಿದ ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ ಎನ್.ಗಂಗಣ್ಣರವರನ್ನು ಸನ್ಮಾನಿಸಲಾಯಿತು. ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಅಧ್ಯಕ್ಷ ವೈ.ಸುಧೀರ್ ಕುಮಾರ್, ನಿರ್ದೇಶಕರಾದ ವೈ.ಜಿ.ರಸೂಲ್, ಗಿರೀಶ್ ಪಲಿಮಾರ್, ಶಿವರಾಮ ಶೆಟ್ಟಿ, ರಾಜಾರಾಮ ರಾವ್, ಮಾಧವ ಆಚಾರ್ಯ ಮತ್ತು ಸುಚರಿತಾ ಎಲ್.ಅಮೀನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಶ್ಮಿತಾ ಪಿ.ಎಚ್., ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಮನೋಜ್ ಕರ್ಕೇರ, ವ್ಯವಸ್ಥಾಪಕ ವಿಶ್ವನಾಥ್ ಎನ್.ಅಮೀನ್ ಪಡುಬಿದ್ರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News